ಚೌಡೇಶ್ವರಿ ದೇವಿ ಮಹೋತ್ಸವ
ತಿಪಟೂರು: ಶ್ರೀ ಆದಿಚುಂಚನಗಿರಿ ಶಾಖಾ ಮಠವಾದ ತಾಲೂಕಿನ ಶ್ರೀ ದಸರೀಘಟ್ಟ ಗ್ರಾಮದ ಶ್ರೀ ಚೌಡೇಶ್ವರಿ ದೇವಿಯವರ ಜಾತ್ರಾ ಮಹೋತ್ಸವವು ಮೇ 19ರಿಂದ 23ರವರೆಗೆ ನಡೆಯಲಿದೆ. ಮೇ 19, 20 ರಂದು ಅಭಿಷೇಕ, ಸಹಸ್ರನಾಮಾರ್ಚನೆ, ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ಮೇ 21ರಂದು ಮಡೆ, ಬಾಯಿಬೀಗ, ಅಮ್ಮನವರ ಉತ್ಸವ, ಮೇ 22ರಂದು ಗ್ರಾಮದ ರಾಜಬೀದಿಗಳಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಕುದುರೆವಾಹನೋತ್ಸವವು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಲಿದೆ. ಅಂದೇ ರಾತ್ರಿ 8.30ಕ್ಕೆ ಶ್ರೀ ಅಮ್ಮನವರ ರಥೋತ್ಸವ ನಡೆಯಲಿದೆ. ಮೇ 23ರಂದು ಅಮ್ಮನವರ ಸಿಡಿ ಉತ್ಸವ ನಡೆಯಲಿದೆ.