ಜಠರ ಲಿವರ್ ಡೇ ಪ್ರಯುಕ್ತ ಇಂದು ಉಚಿತ ಲಿವರ್ ಪರೀಕ್ಷೆ
ತಿಪಟೂರು: ವಿಶ್ವ ಲಿವರ್ ಡೇ ಪ್ರಯುಕ್ತ ಭಾರತೀಯ ವೈದ್ಯಕೀಯ ಸಂಘ, ಸಿಟಿ ಸ್ಕ್ಯಾನ್ ಸೆಂಟರ್, ಡಾ. ರವೀಂದ್ರ ಬಿ.ಎಸ್. ಗ್ಯಾಸ್ಟ್ರೋ ಎಂಟರೊಲೊಜಿಸ್ಟ್‌ಹಾಗೂ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಸಹಯೋಗದೊಂದಿಗೆ ನಗರದ ಕೆ.ಆರ್. ಬಡಾವಣೆಯಲ್ಲಿರುವ ಸಿಟಿ ಸ್ಕ್ಯಾನ್ ಸೆಂಟರ್‌ನಲ್ಲಿ ನಾಳೆ (ಮೇ 18) ಶನಿವಾರ ಬೆಳಿಗ್ಗೆ 8.30 ರಿಂದ 3ಗಂಟೆವರೆಗೆ ಜಠರ, ಲಿವರ್ ಮತ್ತು ಕರುಳಿನ ಸಮಸ್ಯೆಗಳಿಗೆ ಉಚಿತವಾಗಿ ಪರೀಕ್ಷೆ ಮಾಡಲಾಗುವುದು. ಗ್ಯಾಸ್ಟ್ರಿಕ್, ಎದೆಯುರಿ, ಫೈಲ್ಸ್, ಮಲಬದ್ಧತೆ ಮತ್ತಿತರೆ ಸಮಸ್ಯೆಗಳಿಗೆ ಬೆಂಗಳೂರಿನ ಮೀನಾಕ್ಷಿ ಜಠರ ಯಕೃತ್ ಕೇರ್ ಉಚಿತವಾಗಿ ಪರೀಕ್ಷೆ ಮಾಡಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.
ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅರ್ಜಿ ಆಹ್ವಾನ
ಗುಬ್ಬಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಲಭ್ಯವಿರುವ ಬಿಎಸ್ಸಿ, ಪಿಸಿಎಂ, ಸಿಬಿಜೆಡ್‌ಗಳಿಗೆ ಪ್ರವೇಶಾತಿ ಅರ್ಜಿಗಳನ್ನು ಮೇ 17 ರಿಂದ ವಿತರಿಸಲಾಗುವುದು ಎಂದು ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಕುಸುಮ ತಿಳಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಶುಲ್ಕರಹಿತ ಪ್ರವೇಶಾತಿ ನೀಡಲಾಗುತ್ತಿದ್ದು ಅನುಭವಿ, ಉನ್ನತ ಗುಣ ಮಟ್ಟದ ಕಾಯಂ
ಬೋಧಕರು, ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಕಂಪ್ಯೂಟರ್, ಇಂಟರ್‌ನೆಟ್ ಮತ್ತು ಇನ್ನಿತರ ಸೌಲಭ್ಯಗಳಿವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ. 9448174323, 9880384031, 9964613275 ಸಂಪರ್ಕಿಸಬಹುದು.
ಇಂದು ಶಂಕರ ಜಯಂತಿ
ತುಮಕೂರು: ತುಮಕೂರಿನ ಶಂಕರಾಧ್ವೈತ ಸೇವಾ ಸಮಿತಿವತಿಯಿಂದ ಶಂಕರ ಭಗವಾತ್ಪದರ ಜಯಂತಿ ಹಾಗೂ ತತ್ವಜ್ಞಾನಿಗಳ ದಿನವನ್ನು ಮೇ 18 ರಂದು ಸಂಜೆ 5-30 ಕ್ಕೆ ತುಮಕೂರಿನ ಕೆ.ಆರ್. ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮತ್ತೂರಿನ ಅಶ್ವತ್ಥನಾರಾಯಣ ಅವಧಾನಿಗಳು ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಳ್ಳಲ್ಲಿದ್ದಾರೆ. ಶಾಂಕರ ತತ್ವ ಪ್ರಚಾರದ ತುಮಕೂರು ಜಿಲ್ಲಾ ಸಂಚಾಲಕ ಎಂ.ಕೆ. ನಾಗರಾಜರಾವ್ ಉಪಸ್ಥಿತರಿರುವರು. ತುಮಕೂರಿನ ರಾಮಕೃಷ್ಣ-ವಿವೇಕಾನಂದಾಶ್ರದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಅಂದು ಬೆಳಗ್ಗೆ 8 ಗಂಟೆಗೆ ಶಂಕರ ಭಗವತ್ಪಾದರ ಸಾಂಪ್ರದಾಯಿಕ ರುದ್ರಾಭಿಷೇಕ ಸಹಿತ ಶೋಡಷೋಪಚಾರ ಪೂಜೆ, ಶಂಕರ ದಿಗ್ವಿಜಯ ಪಾರಾಯಣ ಅಷ್ಟಾವಧಾನ ಸೇವೆ, ಮಗಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 4-30 ಕ್ಕೆ ಶಂಕರಾಚಾರ್ಯರ ಕೃತಿಗಳಾದ ಸೌಂದರ್ಯ ಲಹರಿ, ಆನಂದಲಹರಿ, ಆನಂದ ಸಿಂಧೂ ಪಾರಾಯಣ, ಸಂಜೆ 5-30 ಕ್ಕೆ ಉಪನ್ಯಾಸ ಕಾರ್ಯಕ್ರಮ ಏರ್ಪಾಟಾಗಿದೆ.