ದಲಿತ ಅಲ್ಪಸಂಖ್ಯಾತರ ಸಾಲಮನ್ನಾ: ಅಭಿನಂದನೆ
ತಿಪಟೂರು: ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ಅನುಕೂಲವಾಗಿರುವಂತೆ ಸಾಲಮನ್ನಾ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮ ಶೋಷಿತ ವರ್ಗದವರಿಗೆ ಹೊಸ ಚೈತನ್ಯ ನೀಡಿದ್ದು, ಅಹಿಂದ ವರ್ಗ ಸಿದ್ದರಾಮಯ್ಯನವರನ್ನು ಅಭಿನಂದಿಸಿದೆ ಎಂದು ಅಹಿಂದ ರಾಜ್ಯ ಸಂಚಾಲಕ ಸೂರ್ಯಪ್ರಕಾಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಹಿಂದ ಪರ ಇರುವ ಕಾಂಗ್ರೆಸ್ ಕಾರ್ಯಕ್ರಮಗಳನ್ನು ವಿರೋಧಿಸುತ್ತಿರುವ ಲೋಕಸಭಾ ಸದಸ್ಯ ಚಂದ್ರೇಗೌಡರ ನಿಲವನ್ನು ಅಹಿಂದ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಅಹಿಂದ ವರ್ಗದ ಮತದಾರರಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಇವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.