ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಬಸವಣ್ಣನವರ ವ್ಯಕ್ತಿತ್ವವೇ ಒಂದು ಮಹಾನ್ ಕಾವ್ಯ'

Vishwanath S
Updated On : 17 May 2013, 11:16 am

ತುಮಕೂರು: ಬಸವಣ್ಣನವರ ವ್ಯಕ್ತಿತ್ವವೇ ಒಂದು ಮಹಾನ್ ಕಾವ್ಯ ಎಂದು ಹಿರಿಯ ಕವಿ ಕಾವ್ಯಸುಧಾ ಪ್ರಿಯ ರಂಗಯ್ಯ ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ಸಾಹಿತ್ಯ, ಸಂಸ್ಕೃತಿ ಕಲಾ ವೇದಿಕೆಯಿಂದ ಬಸವ ಜಯಂತಿ ಅಂಗವಾಗಿ ನಡೆದ ಬಸವಣ್ಣನವರ ಕುರಿತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರ ವಿಚಾರಗಳು ಸಾಹಿತ್ಯಿಕವಾಗಿ ಕೂಡ ಪ್ರಸಿದ್ಧಿ ಪಡೆದಿವೆ. ಸಾಹಿತ್ಯಿಕ ಮೌಲ್ಯಗಳಿಂದಾಗಿ ವಚನ ಸಾಹಿತ್ಯ ಮೇರುಮಟ್ಟದಲ್ಲಿದೆ. ಈ ನಿಟ್ಟಿನಲ್ಲಿ ಸಾಹಿತ್ಯ, ಸಂಸ್ಕೃತಿ ಕಲಾವೇದಿಕೆ ವತಿಯಿಂದ ನಡೆಯುತ್ತಿರುವ ಬಸವಣ್ಣನವರ ಕುರಿತಾದ ಕವಿಗೋಷ್ಠಿ ಸ್ತುತ್ಯಾರ್ಹ ಎಂದರು. ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಬಿ.ಸಿ. ಶೈಲಾ ನಾಗರಾಜ್ ಮಾತನಾಡಿ ವಿಶ್ವ ಸಾಹಿತ್ಯವಾಗಿರುವ ವಚನ ಸಾಹಿತ್ಯದಲ್ಲಿ ಬಸವಣ್ಣನವರ ವಚನಗಳಲ್ಲಿ ಅತ್ಯಂತ ಕಾವ್ಯಾತ್ಮಕ ಗುಣವಿದೆ. ಆಡುಮಾತಿನ, ಸರಳ ವಚನಗಳಲ್ಲಿ  ಅನುಭಾವಿಕತನ ಮಡುಗಟ್ಟಿದೆ ಎಂದರು. ಸಾರ್ವಕಾಲಿಕವಾದ ವಚನಗಳು ಸಾಮಾನ್ಯರನ್ನು ತಟ್ಟುವ ಪರಿ ಅನನ್ಯವಾದುದು ಶರಣ ಸಾಹಿತ್ಯದ ಮೌಲ್ಯಗಳು ಹೆಚ್ಚೆಚ್ಚು ಪ್ರಸ್ತುತವಾಗಬೇಕಾದ ಈ ಕಾಲಘಟ್ಟದಲ್ಲಿ ಬಸವ ಜಯಂತಿ ಆಚರಣೆ ಈ ಕವಿಗೋಷ್ಠಿ ಮೂಲಕ ಅರ್ಥಪೂರ್ಣವಾಗಿದೆ ಎಂದರು. ಬಾಪುಜ, ಹರಳೂರು ಶಿವಕುಮಾರ್, ಶೆನಂಸಿ, ಸುಶೀಲಾ ಸದಾಶಿವಯ್ಯ, ತು.ರಾ. ಸುಂದರರಾಜ್, ಸುಮ ಶ್ರೀ ಹರ್ಷ ಮುಂತಾದವರು ಕವಿತೆಗಳನ್ನು ವಾಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement