ಬಿಎಸ್ಎನ್ಎಲ್ ಸಿಬ್ಬಂದಿ ನಿರ್ಲಕ್ಷ್ಯ: ಗ್ರಾಹಕರ ಆರೋಪ
ಕ.ಪ್ರ.ವಾರ್ತೆ, ಕುಣಿಗಲ್ , ಮೇ 17
ಪಟ್ಟಣದ ಬಿಎಸ್ಎನ್ಎಲ್ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆಯಿಂದ, ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಕಲ್ಪಿಸುವ ಆಪ್ಟಿಕಲ್ ಫೈಬರ್ ಕೇಬಲ್ ಭೂಮಿಯ ಮೇಲ್ಭಾಗದಲ್ಲೆ ಹರಡಿದ್ದು, ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು, ಗ್ರಾಹಕರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಹಾದುಹೋಗಿರುವ ಹಳೇ ರಾಹೆ 48ರ ಪಕ್ಕದಲ್ಲೆ ಇರುವ ಪುರಸಭೆ ಅಂಬೇಡ್ಕರ್ ಭವನದ ಮುಖ್ಯರಸ್ತೆಯ ಬದಿಯಲ್ಲೆ, ಬಿಎಸ್ಎನ್ಎಲ್ ಹಾಕಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ ಭೂಮಿಯ ಮೇಲ್ಭಾಗದಲ್ಲಿದ್ದು, ಬೈಕ್, ವಾಹನಗಳ ಕೆಳಗೆ ಸಿಕ್ಕಿ ಕೇಬಲ್ನ ಮೇಲ್ಮೈ ಛಿದ್ರಗೊಂಡು ಒಳಗಿರುವ ಇತರೆ ವೈರ್ಗಳು ತುಂಡಾಗಿವೆ. ಕೇಬಲ್ ಭೂಮಿಯ ಕೆಳಭಾಗಲ್ಲಿ ಇರುವುದು ನಿಯಮವಾದರೆ,
ಈ ಭಾಗದಲ್ಲಿ ಸುಮಾರು ಎಂಟತ್ತು ತಿಂಗಳ ಹಿಂದೆ ರಸ್ತೆ ಕಾಮಗಾರಿ ನಡೆದಾಗ ಕೇಬಲ್ ಮೇಲೆ ಬಂದಿದ್ದು, ನಂತರ ಸಂಬಂಧಪಟ್ಟ ಇಲಾಖಾ ಸಿಬ್ಬಂದಿಗೆ ಹಲವು ಬಾರಿ ದೂರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರಾದ ವಸಂತ್ ತಿಳಿಸಿದ್ದಾರೆ.
21ನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗಿ ಅಂತರ್ಜಾಲ ಪ್ರಮುಖವಾಗಿದ್ದು, ಇದಕ್ಕೆ ಪೂರಕವಾದ ಆಪ್ಟಿಕಲ್ ಫೈಬರ್ ಕೇಬಲ್ ಬಿಎಸ್ಎನ್ಎಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಸ್ತೆ ಮೇಲೇಯೆ
ತುಂಡಾಗಿ ಬಿದ್ದು, ಇಲಾಖೆಯ ಜನಪರ ಸೇವೆ ಎಷ್ಟರ ಮಟ್ಟಿಗಿದೆ ಎಂದು ಪ್ರಶ್ನಿಸುವಂತಾಗಿದೆ ಎಂದು ಗ್ರಾಹಕರಾದ ಮಂಜುನಾಥ್ ಇಲಾಖಾ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
17,18,1,2,3ನೇ ವಾರ್ಡ್ ವಿವಿಧ ಬಡಾವಣೆಗೆ ದೂರವಾಣಿ , ಅಂತರ್ಜಾಲ ಸಂಪರ್ಕ ಕಲ್ಪಿಸುವ ಈ ಕೇಬಲ್ನ ಸುರಕ್ಷತೆಗೆ ಇನ್ನಾದರೂ ಸಂಬಂಧಪಟ್ಟ ಸಿಬ್ಬಂದಿ ಎಚ್ಚೆತ್ತು ಅಗತ್ಯ ಕ್ಕಮ ಕೈಗೊಂಡು, ಗ್ರಾಹಕರಿಗೆ
ಅನುಕೂಲ ಮಾಡಿ ಕೊಡಲಿ ಎಂದು ಆಗ್ರಹಿಸಿದ್ದಾರೆ.