ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೂಡಲೇ ಜಾರಿಗೊಳಿಸಿ

Vishwanath S
Updated On : 17 May 2013, 11:14 am

ಕ.ಪ್ರ.ವಾರ್ತೆ,  ಪಾವಗಡ ,  ಮೇ 17
ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ತಪ್ಪಿಸುವ ಹಿನ್ನೆಲೆಯಲ್ಲಿ ಬಡವರಿಗಾಗಿ ಕೇಂದ್ರ ಸರ್ಕಾರ ಅನುಷ್ಠಾನ ಮಾಡಿದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಬಹುತೇಕ ಕೂಲಿಕಾರರು ಮನವಿ ಮಾಡಿದ್ದಾರೆ.
2010-11ನೇ ಸಾಲಿನಲ್ಲಿ ಗ್ರಾಮೀಣಾ ಬಡ ಕೂಲಿಕಾರರ ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರ ಅನುಷ್ಠಾನ ಮಾಡಿದ್ದ ಖಾತ್ರಿ ಯೋಜನೆಯನ್ನು ಕೂಡಲೇ ಜಾರಿಗೊಳಿಸುವಂತೆ ಇಲ್ಲಿನ ಕೂಲಿಕಾರರು ಒತ್ತಾಯಪಡಿಸಿದ್ದು ಕಳೆದ 2011-12ನೇ ಸಾಲಿನಲ್ಲಿ ನಿರ್ವಹಿಸಲಾದ ಸುಮಾರು 18 ಕೋಟಿ ಕಾಮಗಾರಿಗಳ ಕೂಲಿಕಾರರ ಉಳಿಕೆ ಹಣವನ್ನು ಕೂಡಲೇ ಬಿಡುಗಡೆ ಮಾಡಿವಂತೆ ಅವರು ಮನವಿ ಮಾಡಿದ್ದಾರೆ.
ತಾ.ಕೂಲಿಕಾರ್ಮಿಕ ಹಾಗೂ ರೈತರ ಜೀವನೋಪಾಯದ ಪ್ರಧಾನ ಬೆಳೆ ನೆಲಗಡಲೇ ಪ್ರತಿ ವರ್ಷ ಮಳೆ ಅಭಾವದಿಂದ ನಷ್ಟಕ್ಕೀಡಾಗಿ ಕಂಗಲಾದ ಕೂಲಿಕಾರರು ಖಾತ್ರಿ ಯೋಜನೆಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದಾರೆ.
ಯೋಜನೆಯ ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಈ ಯೋಜನೆ  ತಟಸ್ಥಗೊಂಡಿದ್ದು ಕಾಮಗಾರಿಗಳ ಕೂಲಿ ಲೆಕ್ಕಾ ಎಂಐಎಸ್ಗೆ ಫೀಡ್ ಮಾಡಿ ವರ್ಷಗಳೆ ಕಳೆದಿದ್ದರೂ ಕೆಲಸದ ಕೂಲಿ ಹಣ ಮಾತ್ರ ಇದುವರೆಗೂ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೇ ನಂಬಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಇಂದು ದಿಕ್ಕುಕಾಣದಂತಾಗಿ ತಮ್ಮ ಜೀವನೋಪಾಯಕ್ಕಾಗಿ ಕುಟುಂಬ ಸಮೇತ ಮತ್ತೆ ನಗರ ಪ್ರದೇಶಗಳಿಗೆ ವಲಸೆ ಹೋಗುವ ದುಃಸ್ಥಿತಿ ನಿರ್ಮಾಣವಾಗಿದೆ.
ಪಡಿತರದಾರರಿಗೆ 1ರು.ಗೆ ಕೆಜಿ ಅಕ್ಕಿ, ಸಾಲಮನ್ನ ಹಾಲಿಗೆ ಪ್ರೋತ್ಸಾಹ ಧನ ಸೇರಿದಂತೆ ಬಡವರ ಕಲ್ಯಾಣಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ ಸಿಎಂ ಸಿದ್ದರಾಮಯ್ಯ  ತಾಲೂಕನ್ನು  ಗಂಭೀರವಾಗಿ ಪರಿಗಣಿಸಿ ಎನ್ಆರ್ಇಜಿ ಯೋಜನೆ ಅನುಷ್ಠಾನ ಮಾಡಿ ಬಡವರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement