ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಾಲಾ ಆವರಣದಲ್ಲಿ ಕೃಷ್ಣಮೃಗದ ಮರಿ

Vishwanath S
Updated On : 17 May 2013, 11:12 am

ಗುಬ್ಬಿ: ತಾಲೂಕಿನ ಆಡಗೊಂಡನಹಳ್ಳಿಯ ಗ್ರಾಮದ ಶಾಲೆಯ ಆವರಣದಲ್ಲಿ ಕೃಷ್ಣಮೃಗದ ಮರಿಯೊಂದು ಕಳೆದ ಒಂದು ತಿಂಗಳ ಹಿಂದೆ ಪತ್ತೆಯಾಗಿ ಎಲ್ಲರ ಅಚ್ಚುಮೆಚ್ಚಿಗೆ ಪಾತ್ರವಾಗಿದೆ.
 ಈ ಕೃಷ್ಣಮೃಗ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ, ಬಂಡಿಹಳ್ಳಿ ಅರಣ್ಯ ಪ್ರದೇಶದಿಂದ ಬಂದಿದೆ. ಈ ಮರಿ ದಾರಿ ತಪ್ಪಿ  ಇಲ್ಲಿ ಕಾಣಿಸಿಕೊಂಡಿದೆ.  ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಗುಬ್ಬಿ ತಹಸೀಲ್ದಾರ್ ಅವರಿಗೆ ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಹರೀಶ್ ಮತ್ತು ಸಿಬ್ಬಂದಿ ಕೃಷ್ಣಮೃಗದ ಮರಿಯನ್ನು ತಂದು ತಮ್ಮ ಕಚೇರಿಯಲ್ಲಿ ಹಾಲುಣಿಸಿ ಒಂದು ತಿಂಗಳ ಕಾಲ ಸಾಕಿ ಮೇವು ತಿನ್ನುವ ಹಂತಕ್ಕೆ ತಲುಪಿದ ನಂತರ ಅದನ್ನು ಮಧುಗಿರಿ ಸಮೀಪದ ಮೈದನಹಳ್ಳಿ ಕೃಷ್ಣಮೃಗ ಸಂರಕ್ಷಣಾ ವನಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement