ಶ್ರೀ ವಾಸವಿ ಜಯಂತಿ ಮಹೋತ್ಸವ
ತಿಪಟೂರು: ನಗರದ ಆರ್ಯವೈಶ್ಯ ಮಂಡಳಿ ವತಿಯಿಂದ ಶ್ರೀ ವಾಸವಿ ಜಯಂತಿ ಮಹೋತ್ಸವವು ಮೇ.21ರವರೆಗೆ ನಡೆಯಲಿದೆ ಎಂದು ಆರ್ಯವೈಶ್ಯ ಮಂಡಳಿ ಜಿಲ್ಲಾಧ್ಯಕ್ಷ ಬಾಗೇಪಲ್ಲಿ ನಟರಾಜ್ ತಿಳಿಸಿದ್ದಾರೆ. ಶನಿವಾರ ಅಮ್ಮನವರಿಗೆ ನಾಣ್ಯಗಳ ಅಲಂಕಾರ, ಕಬ್ಬಿನ ಹಾಲಿನ ಅಲಂಕಾರ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೇ 19 ಶ್ರೀ ಅಮ್ಮನವರಿಗೆ ಕಾಯಿತುರಿ ಅಲಂಕಾರ, ಕ್ಷೀರಾಭಿಷೇಕ ನಡೆಯಲಿದೆ. ಮೇ 20 ಶ್ರೀ ವಾಸವಿ ಜಯಂತಿ, ತುಲಾಬಾರ ಸೇವೆ, ತೊಟ್ಟಿಲು ಸೇವೆ ಹಾಗೂ ವಾಸವಿ ಹೋಮ ಹಾಗೂ ವಜ್ರಾಂಗಿ ಅಲಂಕಾರ ಏರ್ಪಡಿಸಲಾಗಿದೆ. ಅಂದೇ ಸಂಜೆ 6.30ಕ್ಕೆ ಶ್ರೀ ಅಮ್ಮನವರ ಉತ್ಸವ ಶ್ರೀ ವಾಸತಿ ಜಾತ್ರೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಲಿದ್ದು, ಆಕರ್ಷಕ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ. ಮೇ 21ರಂದು ಅನ್ನಪೂರ್ಣೇಶ್ವರಿ ಅಲಂಕಾರ, ಉಯ್ಯಾಲೋತ್ಸವ ಹಾಗೂ ಮಹಾಪ್ರಸಾದ ನಡೆಯಲಿದೆ.
ಈ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಬಾಗೇಪಲ್ಲಿ ನಟರಾಜ್ ತಿಳಿಸಿದ್ದಾರೆ.