ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಧಾರ್, ಸಿಲಿಂಡರ್ ಸಬ್ಸಿಡಿಗೆ, 3 ತಿಂಗಳ ಅವಕಾಶ

Vishwanath S
Updated On : 20 May 2013, 11:03 am

ಕನ್ನಡಪ್ರಭ ವಾರ್ತೆ ,  ತುಮಕೂರು ,  ಮೇ 20
ಆಧಾರ್, ಸಿಲಿಂಡರ್ ಸಬ್ಸಿಡಿಗೆ ಮತ್ತೆ 3 ತಿಂಗಳ ಕಾಲಾವಕಾಶ ಒದಗಿಸಿರುವುದಾಗಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಬೆಂಗಳೂರು ವಿಭಾಗದ ಮುಖ್ಯಸ್ಥ ಜಾರ್ಜ್ ಪೌಲ್ ತಿಳಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಆಧಾರ್ ನಂಬರ್ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಸಮೀಕರಿಸಿ, ಗ್ರಾಹಕರಿಗೆ ಸಿಲಿಂಡರ್ ಸಬ್ಸಿಡಿ ಹಣವನ್ನು ನೇರವಾಗಿ ಅವರಿಗೇ ತಲುಪಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ 10 ರಾಜ್ಯಗಳ 20 ಆಯ್ದ ಜಿಲ್ಲೆಗಳಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ.  
ಆಧಾರ್ ಸಂಖ್ಯೆ ಮತ್ತು ಎಲ್‌ಪಿಜಿ ಗ್ರಾಹಕರ ಸಂಖ್ಯೆಯನ್ನು  ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿಸದೆ ಇರುವ ಗ್ರಾಹಕರಿಗೆ 3 ತಿಂಗಳ ಕಾಲಾವಕಾಶ ಇದ್ದು ಇಷ್ಟರಲ್ಲಿ ಈ ಪ್ರಕಿಯೆ ಪೂರ್ಣಗೊಳಿಸಬೇಕು. ಈ ಅವಧಿಯಲ್ಲಿ ಅವರು 9 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಲಿದ್ದಾರೆ.
ಹೆಚ್ಚುವರಿ ಕಾಲಾವಧಿ ಅಂದರೆ ಈಗ ನಿಗದಿ ಪಡಿಸಿರುವ 3 ತಿಂಗಳ ನಂತರ ಎಲ್ಲಾ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುವುದು. ಅದರಂತೆ ಸಬ್ಸಿಡಿ ಹಣ ಆಧಾರ ಸಂಖ್ಯೆ, ಗ್ರಾಹಕ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಜೋಡಣೆಯನ್ನು ಈಗ ನಿಗದಿಪಡಿಸಿರುವ ಕಾಲಾವಧಿಯೊಳಗೆ ಗ್ರಾಹಕರು ಮಾಡಿಸಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಗ್ರಾಹಕರಿಗೆ ಯಾವುದೇ ಸಬ್ಸಿಡಿ ಹಣ ದೊರೆಯುವುದಿಲ್ಲ ಎಂದು ತಿಳಿಸಿದರು.
ಶೀಘ್ರ ಜೋಡಣೆ ಮಾಡಿಸಿ: ಈಗ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಸಿದ್ದು ಇನ್ನು ಸಂಖ್ಯೆ ಬಾರದೇ ಇರುವ ಗ್ರಾಹಕರು ಆದಷ್ಟು ಬೇಗ ಜೋಡಣೆ ಮಾಡಿಸಬೇಕು. ಆಧಾರ್  ಕಾರ್ಡ್ ನಂಬರ್ ಅನ್ನು ಗ್ಯಾಸ್ ಏಜೆನ್ಸಿಯವರೇ ಮಾಡಿಸಲು ಮುಂದಾಗಲಿದ್ದಾರೆ ಎಂದರು.
ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಯಾವುದೇ ತಕರಾರು ಮಾಡದೇ ನಿಗದಿಪಡಿಸಿರುವ ಕಾಲಾವಧಿ ತನಕ ಕಾಯುವಂತೆ ಪೌಲ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement