ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರ್ ಜಗಳ; ಮಹಿಳೆ ಸೇರಿ 3 ಯುವಕರಿಗೆ ಗಾಯ

Vishwanath S
Updated On : 20 May 2013, 11:06 am

ಕ.ಪ್ರ.ವಾರ್ತೆ ,  ಪಾವಗಡ ,  ಮೇ 20
ಕುಡಿಯುವ ನೀರಿಗಾಗಿ ಎರಡು ಗುಪುಗಳ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದು  ಮಹಿಳೆ ಸೇರಿದಂತೆ ಮೂವರು ಯುವಕರಿಗೆ ತೀವ್ರ ಗಾಯವಾದ ಘಟನೆ ಸೋಮವಾರ ಸಂಜೆ ಪಟ್ಟಣದ ಆದರ್ಶ ನಗರ ದಲಿತ ಕಾಲೋನಿಯಲ್ಲಿ ನಡೆದಿದೆ.
ದಲಿತ ಮಹಿಳೆ ನಾಗಮ್ಮ (45) ಯುವಕರಾದ ರವಿ (25), ಮಂಜು (30) ಎಂಬುವರಿಗೆ  ಗಲಾಟೆಯಲ್ಲಿ ತೀವ್ರ ಪೆಟ್ಟಾಗಿದೆ. ಪುರಸಭೆಯಿಂದ ಸಾರ್ವಜನಿಕ ನಲ್ಲಿಗೆ ಕುಡಿಯುವ ನೀರು ಸರಬರಾಜು ಆಗಿದ್ದು ಪಟ್ಟಣದ ಆದರ್ಶ ನಗರ ಕಾಲೋನಿಗೆ ನೀರು ಪೂರೈಕೆ ಆಗಿರಲಿಲ್ಲ. ಆದರ್ಶನಗರದ ಕಾಲೋನಿಯ ಪಕ್ಕದಲ್ಲಿಯೆ ಇನ್ನೊಂದು ಜನಾಂಗದ  ಮನೆಗಳ ಬಳಿ ಇರುವ ಸಾರ್ವಜನಿಕ ನಲ್ಲಿಗೆ  ಕುಡಿಯುವ ನೀರು ಬಿಡಲಾಗಿತ್ತು. ಅಲ್ಲಿಯೇ ಪಕ್ಕದಲ್ಲಿ ವಾಸವಾಗಿರುವ ರವಿ ಎಂಬುವರು ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ಬರಲು ಹೋಗಿದ್ದಾರೆ. ಕುಡಿಯುವ ನೀರಿನ ತೀವ್ರ ಅಭಾವವಿದ್ದರೂ ನಲ್ಲಿಯಲ್ಲಿ ಗುಟ್ಟಹಳ್ಳಿಯ ಮಹಿಳೆಯೊಬ್ಬರು ಬಟ್ಟೆ ತೊಳೆಯುತ್ತಿರುವುದನ್ನು ವಿರೋಧಿಸಿದ್ದಾರೆ.
ಆಗ ರವಿ ಮತ್ತು ಆಕೆಯ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಈ ಮಧ್ಯೆ ಹಲವರು ಸೇರಿ, ಹೊಡೆದಾಟ  ನಡೆಯಿತು.  ಈ ನಡುವೆ ಕೆಲವರು ಮನೆಗಳ ಮೇಲೆ  ಕಲ್ಲುಗುಂಡು, ಇಟ್ಟಿಗೆ,  ಹೆಂಚು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಬೀಸಿದ ಪರಿಣಾಮ ನಾಗಮ್ಮ, ರವಿ, ಮಂಜು ಸೇರಿದಂತೆ ಅನೇಕ ಮಂದಿಗೆ ತೀವ್ರ ಗಾಯಗೊಂಡರು.
ಇವರನ್ನೆಲ್ಲ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಯಿತು. ತಕ್ಷಣ ಆಗಮಿಸಿದ ಪೊಲೀಸರು ಕ್ರಮ ಕೈಗೊಂಡರು.
ಘಟನೆ ಹಿನ್ನೆಲೆಯಲ್ಲಿ ಪಿಎಸ್‌ಐ ರಾಮಕೃಷ್ಣಪ್ಪ  ಬಿಗಿ ಬಂದೋಬಸ್ತ್ ಏರ್ಪಡಿಸಿದರು. ದುಷ್ಕರ್ಮಿಗಳು ತಲೆ ತಪ್ಪಿಸಿಕೊಂಡಿದ್ದು ಬೆಟ್ಟದಲ್ಲಿ ಶೋಧ ನಡೆಸಲಾಗಿದೆ. ಪೊಲೀಸ್ ಬಂದೋಬಸ್‌ನಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement