ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಾರಿ ಮಳೆ, ಧರೆಗುರುಳಿದ ಮರಗಳು

Vishwanath S
Updated On : 20 May 2013, 11:04 am

ಕ.ಪ್ರ. ವಾರ್ತೆ ,   ತುಮಕೂರು ,   ಮೇ 20
ಬಿಸಿಲ ಬೇಗೆಯಿಂದ ಬಸವಳಿದಿದ್ದ ತುಮಕೂರಿನ ಮೇಲೆ ವರುಣ ಕರುಣೇ ತೋರಿದ್ದು 1 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಹಲವಾರು ಮರಗಳು ಧರೆಗುಳಿದವು. ತುಮಕೂರಿನ ಬಿ.ಎಚ್. ರಸ್ತೆ, ಗೋಕುಲ ಬಡಾವಣೆ,  ಮುಂತಾದ ಕಡೆಗಳಲ್ಲಿ ಮರಗಳು ಧರೆಗುಳಿದಿವೆ. ಬಿ.ಎಚ್. ರಸ್ತೆಯಲ್ಲಿ ಮರ ಉರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಮಳೆಯಿಂದಾಗಿ ಮರಗಳು ಧರೆಗೆ ಉರುಳಿದ ಪರಿಣಾಮ ವಿದ್ಯುತ್ ತಂತಿಗಳು ಕಟ್ ಆಗಿದ್ದವು. ಹೀಗಾಗಿ ವಿದ್ಯುತ್ ಸಮಸ್ಯೆ ತಲೆದೋರಿತ್ತು.
ತುಮಕೂರಿನ ಭದ್ರಮ್ಮ ಛತ್ರದ ಬಳಿ ರಸ್ತೆ ಮಧ್ಯೆ 1 ಅಡಿಯಷ್ಟು ನೀರು ಹರಿಯುತ್ತಿದ್ದು. ಇವಿಷ್ಟೆ ಅಲ್ಲದೇ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನೀರನ್ನು ಹೊರ ಹಾಕಲು ಜನತೆ ಹರಸಾಹಸ ಪಡುವಂತಾಯಿತು. ಮಳೆಯಿಂದಾಗಿ ಶೀತ ಗಾಳಿ ಕೂಡ ಬೀಸುತ್ತಿದ್ದು ಡಿಸೆಂಬರ್ ಚಳಿಯನ್ನು ನೆನಪಿಸುವಂತಾಗಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನ ಮಳೆಯಿಂದಾಗಿ ಕೆಸರು ಗದ್ದೆಯಾಗಿದೆ. ಸಂಜೆ ಸುಮಾರು 4 ಗಂಟೆಗೆ ಜೋರು ಗಾಳಿ, ಗುಡುಗು ಸಿಡಿಲಿನೊಂದಿಗೆ ಮಳೆ ಆರಂಭವಾಯಿತು. ಕೆಲವು ಕಡೆ ತೆಂಗಿನ ಸೋಗೆ ಗರಿಗಳು ಬಿದ್ದು ಕಾರು, ಬೈಕ್ ಜಖಂಗೊಂಡಿವೆ. ಸುಮಾರು 1 ಗಂಟೆಗಳಿಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿಯಿತು.
ಕಳೆದ ಒಂದು ತಿಂಗಳಿನಿಂದ ಬಿಸಿಲಬೇಗೆಗೆ ಬಸವಳಿದ್ದ ಜನತೆಗೆ ಮಳೆರಾಯ ತಂಪನ್ನು ನೀಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement