ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೀತ ವಿಮುಕ್ತರಿಗೆ ಸಾಲ ಸೌಲಭ್ಯ: ಶಾಸಕ ರಾಜಣ್ಣ

Vishwanath S
Updated On : 24 May 2013, 12:22 pm

ಕ.ಪ್ರ. ವಾರ್ತೆ ,   ಮಧುಗಿರಿ ,   ಮೇ 23
ಜೀತ ವಿಮುಕ್ತರು ಸ್ವಾಭಿಮಾನದ ಬದುಕು ಸಾಗಿಸಲು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕುರಿ ಸಾಕಣೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ತಾ.ಪಂ.ಮತ್ತು ಜೀವಿಕ ಸಂಘಟನೆ ಆಶ್ರಯದಲ್ಲಿ ಏರ್ಪಡಿಸಿದ್ದ ಕೇಂದ್ರ ಪುರಸ್ಕೃತ ಜೀತ ವಿಮುಕ್ತರ ಪುನರ್ ವಸತಿ ಸಹಾಯಧನ ಯೋಜನೆಯಡಿ ಮಾಸಾಶನ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೀತ ವಿಮುಕ್ತರು ಸಾವಲಂಬನೆ ಬದುಕು ಕಟ್ಟಿ ಕೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ಕುರಿ ಸಾಕಣಿಕೆಗೆ ಸಾಲ ನೀಡುವುದಾಗಿ ತಿಳಿಸಿದ ರಾಜಣ್ಣ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು. ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಿ ಇಂದಿರಾ ಆವಾಜ್ ಯೋಜನೆಯಡಿ ಮನೆ ಕಟ್ಟಿ ಕೊಡಲಾಗುವುದು. ಜೀವಿಕ ಸಂಘಟನೆ ತಾಲೂಕಿನಲ್ಲಿ 916 ಜೀತ ವಿಮುಕ್ತರನ್ನು ಗುರುತಿಸಿ ಅವರಿಗೆ 65.95 ಲಕ್ಷ ರು.ಮಾಸಾಶನದ ಚೆಕ್ ವಿತರಿಸಿರುವುದು ಶ್ಲಾಘನೀಯ, ಜೀತ ಪದ್ಧತಿ ಪರಿಸ್ಥಿತಿಯ ಕೂಸು, ಜೀತ ವಿಮುಕ್ತರು ಸ್ವಾಭಿಮಾನದ ಬದುಕು ಸಾಗಿಸಲು ಮಾಸಾಶನ ಸಹಕಾರಿ. ಪ್ರತಿ ಜೀತ ವಿಮುಕ್ತರಿಗೂ 7200 ರು. ಮಾಸಾಶನ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಗೋವಿಂದರಾಜು ನಬಾರ್ಡ್ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಜೀತ ವಿಮುಕ್ತರಿಗೆ ಸಾಲ ನೀಡಲಾಗುವುದು. ಜೀತ ವಿಮುಕ್ತರು ದುಶ್ಚಟಗಳನ್ನು ತ್ಯಜಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಕರೆಯಿತ್ತರು.
ಜೀವಕ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಯಶೋಧರಾಜಣ್ಣ, ಉಪಾಧ್ಯಕ್ಷೆ ಸಿದ್ಧಗಂಗಾಂಭಿಕೆ ಸುಬ್ಬರಾಯಪ್ಪ, ತಹಸೀಲ್ದಾರ್ ರಮೇಶ್, ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತಾ.ಪಂ.ಇಓ ಮಹಾಲಿಂಗಪ್ಪ,ಪುರಸಭೆ ಸದಸ್ಯ ಎನ್.ಗಂಗಣ್ಣ, ತಿಮ್ಮರಾಯಪ್ಪ, ಅಯೂಬ್, ಅಲೀಂ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ
ತುಂಗೋಟಿ ರಾಮಣ್ಣ , ಗುಟ್ಟೆ ಚಿಕ್ಕರಂಗಪ್ಪ, ರಾಜ್‌ಗೋಪಾಲ್ ಮತ್ತಿತರರು ಇದ್ದರು. ಜೀವಿಕಾ ಸಂಘಟನೆ ತಾ.ಸಂಚಾಲಕ ಡಿ.ಟಿ. ಸಂಜೀವಮೂರ್ತಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement