ಶಾಸಕರ ನೂತನ ಕಚೇರಿ ಉದ್ಘಾಟನೆ
ಪಾವಗಡ: ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಶಾಸಕರ ನೂತನ ಕಚೇರಿಯನ್ನು ಶಾಸಕ ಕೆ.ಎಂ.ತಿಮ್ಮರಾಯಪ್ಪ ಉದ್ಘಾಟಿಸಿದರು.
ಈ ಹಿಂದೆ ಮಾಜಿ ಶಾಸಕ ವೆಂಕಟರಮಣಪ್ಪ ಅವರಿಗೆ ನಿಯೋಜಿಸಿದ ಕಚೇರಿಯನ್ನೇ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ನಿಯೋಜಿಸಿದ್ದು ಕಚೇರಿಯನ್ನು ನವೀಕರಿಸುವ ಮೂಲಕ ಬುಧವಾರ ಬೆಳಿಗ್ಗೆ ಸೂಕ್ತ ಸಮಯದಲ್ಲಿ ಅರ್ಚಕರಿಂದ ಪೂಜೆ ಕಾರ್ಯಕ್ರಮಗಳನ್ನು ನೆರೆವೇರಿಸಿ ಕಚೇರಿಯನ್ನು ತೆರೆಯಲಾಯಿತು.ಇದೇ ಸಂದರ್ಭದಲ್ಲಿ ತಾ.ಜೆಡಿಎಸ್ ಅಧ್ಯಕ್ಷ ಎನ್. ತಿಮ್ಮಾರೆಡ್ಡಿ, ಮುಖಂಡರಾದ ವಕೀಲ ವೆಂಕಟರಾಮರೆಡ್ಡಿ, ತಾಪಂ ಸದಸ್ಯೆ ಪಾರ್ವತಮ್ಮ ಹನುಮಂತರಾಯಪ್ಪ, ಎಸ್.ಕೆ.ರೆಡ್ಡಿ, ವಿ. ಚಿಂತಲರೆಡ್ಡಿ, ತಾಪಂ ಇಒ ರಂಗನಾಥ್, ಜಿಪಂ ಎಇಇ ಆಶೋಕರೆಡ್ಡಿ ಸೇರಿದಂತೆ ಪಕ್ಷದ ತಾಪಂ ಹಾಗೂ ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.