ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಲುಷಿತ ಆಹಾರ ಸೇವಿಸಿ ನಲವತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ

Vishwanath S
Updated On : 24 May 2013, 10:57 am

ಕುಣಿಗಲ್: ಕಲುಷಿತ ಆಹಾರ ಸೇವಿಸಿ ನಲವತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಕಪಿನಿಪಾಳ್ಯ ಗ್ರಾಮದ ಶಿವಣ್ಣ ಎಂಬುವವರ ಮನೆಯಲ್ಲಿ ಶುಕ್ರವಾರ ಗೃಹಪ್ರವೇಶ ಮಹೋತ್ಸವ ಕಾರ್ಯಕ್ರಮವಿದ್ದು ಗೃಹಪ್ರವೇಶಕ್ಕಾಗಿ ಸಸ್ಯಹಾರಿ ಅಡುಗೆ ಸಿದ್ಧಪಡಿಸಿ ಮಧ್ಯಾಹ್ನ ಉಣಬಡಿಸಲಾಗಿತ್ತು. ಸಂಜೆ 7 ಗಂಟೆಗೆ ಮಕ್ಕಳಿಬ್ಬರಿಗೆ ವಾಂತಿ, ಭೇದಿ ಕಾಣಿಸಿಕೊಂಡು ನಿತ್ರಾಣರಾದ ಹಿಂದೇಯೆ ದೊಡ್ಡವರಲ್ಲೂ ಇದೆ ಲಕ್ಷಣಗಳು ಕಾಣಿಸಿಕೊಂಡಿತು. ಕೂಡಲೆ ಗ್ರಾಮಸ್ಥರು 108 ವಾಹನಕ್ಕೆ ಕರೆಮಾಡಿದರು. 108 ವಾಹನದ ಸಿಬ್ಬಂದಿ ಗ್ರಾಮಕ್ಕೆ ತೆರಳಿ, ಅಸ್ವಸ್ತರಾದವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರು. 108 ವಾಹನ ಗ್ರಾಮಕ್ಕೆ ಬಂದು ಹೋದ ನಂತರ ಇತರರರಿಗೂ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಹುತೇಕ ಮಂದಿ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆಗೆ ದಾಖಲಾದರು. ವಿಷಯ ತಿಳಿದು ಶಾಸಕ ಡಿ.ನಾಗರಾಜಯ್ಯ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗಕ್ಷೇವು ವಿಚಾರಿಸಿ, ಆಸ್ವಸ್ತರು ಗುಣಮುಖರಾಗುವವರೆಗೂ ಸ್ಥಳದಲ್ಲಿದ್ದು ಸೂಕ್ತ ಆರೈಕೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದರು. ಘಟನೆಗೆ ಸಂಬಂಧಿಸಿದಂತೆ ವೈದ್ಯ ಗಣೇಶ್ ಬಾಬು, ಲಕ್ಷಣಗಳು ನೋಡಿದಲ್ಲಿ ಕಲುಶಿತ ಆಹಾರ ಸೇವನೆ ಎಂದು ಶಂಕಿಸಲಾಗಿದೆ. ನಲವತ್ತೆರಡು ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಇಪ್ಪತ್ತೆರಡು ಮಕ್ಕಳಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement