ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್‌ನಿಂದ ಸೋಲಿನ ಪರಾಮರ್ಶೆ

Vishwanath S
Updated On : 24 May 2013, 10:51 am

ತುಮಕೂರು: ಇಲ್ಲಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕ ಬಿ.ಸಿ. ಗೌರಿಶಂಕರ್ ಅಧ್ಯಕ್ಷತೆಯಲ್ಲಿ
ತುಮಕೂರು ಗ್ರಾಮಾಂತರ ಕ್ಷೇತ್ರದ ಸಭೆ ನಡೆಯಿತು.
ಸಭೆಯಲ್ಲಿ ಸೋಲಿನ ಪರಾಮರ್ಶೆ ನಡೆಯಿತು. ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣ. ಈ ಸೋಲಿಗೆ ಯಾರೂ ಎದೆಗುಂದದೆ ನಾವು ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲರಂತೆ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸೋಣ ಎಂದು ಗೌರಿಶಂಕರ್ ಕರೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವಾಗಿ ಕಾರ್ಯಾಚರಣೆ ಮಾಡುವುದೇ ದೊಡ್ಡ ಪ್ರಜಾಸೇವೆ. ಇದು ಅಧಿಕಾರಕ್ಕಿಂತಲೂ ಮಹತ್ವವಾದುದು ಎಂದರು. ಕಾರ್ಯಕರ್ತರು ಎದೆಗುಂದಬಾರದು. ಮುಂದಿನ ಚುನಾವಣೆಗಳನ್ನು ಧೈರ್ಯದಿಂದ ಎದುರಿಸಬೇಕೆಂದು ತಿಳಿಸಿದರು. ಅಲ್ಲದೇ ಪಕ್ಷಕ್ಕಾಗಿ, ತಮ್ಮ ಪರವಾಗಿ ದುಡಿದ ಎಲ್ಲರಿಗೂ ಇದೇ ಸಂದರ್ಭದಲ್ಲಿ ಗೌರಿಶಂಕರ್  ಕೃತಜ್ಞತೆ ಸಲ್ಲಿಸಿದರು.
 ಸಭೆಯಲ್ಲಿ ಗ್ರಾಮಾಂತರ ವಿಭಾಗದ ಅಧ್ಯಕ್ಷ ಮಹಮದ್ ಇಕ್ಬಾಲ್, ಚೆಲುವರಾಜ್, ವೆಂಕಟೇಶ್, ಸಫೀರ್ ಅಹಮದ್, ಸ್ವಾಂದೇನಹಳ್ಳಿ ಅಯೂಬ್ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement