ಬಸವಣ್ಣ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದ ಮಾನವತಾವಾದಿ
ತಿಪಟೂರು: ಬಸವೇಶ್ವರರು ಕ್ರಾಂತಿಯೋಗಿ, ದಾರ್ಶನಿಕ, ಧಾರ್ಮಿಕ ನೇತಾರ. ದಲಿತರ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾನವತಾವಾದಿ ಎಂದು ಉಪನ್ಯಾಸಕ ಎಂ.ಡಿ.ಶಿವಕುಮಾರ್ ತಿಳಿಸಿದರು.
ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ನಡೆದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಹಿಳೆ ಪುರುಷರ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರು ಅಂತರಂಗಶುದ್ಧಿ ಮತ್ತು ಬಹಿರಂಗ ಶುದ್ಧಿಯನ್ನು ಹೊಂದಬೇಕೆಂದು ಸಮಾಜಕ್ಕೆ ಕರೆಕೊಟ್ಟವರೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡರು ಬಸವಣ್ಣನವರ ತತ್ವಗಳು ಸರ್ವಕಾಲಿಕ ಸತ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಿವಬಸಯ್ಯ, ಎಚ್.ಎಸ್. ಯೋಗಾನಂದಮೂರ್ತಿ, ಗಂಗಣ್ಣ, ಪರುಶುರಾಮ ನಾಯಕ್,ಪಾಲಾಕ್ಷಮೂರ್ತಿ, ಬಸವರಾಜು, ವಿ.ಎನ್.ಮಹದೇವಯ್ಯ, ಚನ್ನಬಸವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.