ರೇಲ್ವೆ ಲೇನ್ ಭೂ ಸ್ವಾಧೀನ ಪರಿಹಾರಕ್ಕೆ ಶೀಘ್ರ ಕ್ರಮ
ತುಮಕೂರು: ತುಮಕೂರು - ರಾಯದುರ್ಗ ರೇಲ್ವೆ ಲೇನ್‌ಗೆ ಅಗತ್ಯವಿರುವ ಭೂ ಸ್ವಾಧೀನ ಮಾಡಿಕೊಳ್ಳಲು ಈಗಾಗಲೇ ಸುಮಾರು 20 ಕೋಟಿ ರು. ಹಣ ಬಿಡುಗಡೆಯಾಗಿ 2 ವರ್ಷಗಳು ಕಳೆದಿವೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಆಂಧ್ರಪ್ರದೇಶದಿಂದ ಈಗಾಗಲೇ ಯೋಜನೆ ಆರಂಭವಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಕಡೆಯಿಂದಲೂ ಕಾಮಗಾರಿ ಆರಂಭಿಸಲು ಸುಮಾರು 40 ಕೋಟಿ ರು. ಕಳೆದ 2 ವರ್ಷಗಳಿಂದ ಮುಂಗಡ ಪತ್ರದಲ್ಲಿ ಕಾಯ್ದಿರಿಸಲಾಗಿದೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಕಾಮಗಾರಿ ಕುಂಠಿತವಾಗಿದೆ. ರೈತರು ಹೆಚ್ಚಿನ ಪರಿಹಾರ ಕೇಳುತ್ತಿರುವುದು ನ್ಯಾಯೋಚಿತವಾಗಿದೆ. ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಂಡು ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ, ರೈತರೊಂದಿಗೆ ನಡೆಸಿದ ಸಭೆ, ವಿವರದೊಂದಿಗೆ ಮನವಿ ಮಾಡಿದ್ದು, ಶೀಘ್ರವಾಗಿ ಅಗತ್ಯ ಕ್ರಮ ಕೈಗೊಂಡು ಪರಿಹಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಂಸದ ಬಸವರಾಜು ತಿಳಿಸಿದ್ದಾರೆ.