ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಲೆಮಾರಿ ಮಕ್ಕಳಿಗೆ ಸೃಜನಶೀಲ ತರಬೇತಿ

Rashmi Kasaragodu
Updated On : 25 May 2013, 11:39 am

ತಿಪಟೂರು: ಇಲ್ಲಿನ ಶಾರದಾನಗರದ ರೇಲ್ವೆ ನಿಲ್ದಾಣ ಸಮೀಪ ಇರುವ ಅಲ್ಪಸಂಖ್ಯಾತ ಮುಸ್ಲಿಂ ಅಲೆಮಾರಿ ಮಕ್ಕಳು ಮತ್ತು ಅಣ್ಣಾಪುರ ಹೊರ ವಲಯದಲ್ಲಿರುವ ಅಲೆಮಾರಿ ಮಕ್ಕಳಿಗೆ ಸೃಜನಶೀಲ ತರಬೇತಿ ನೃತ್ಯ, ದೇಶಭಕ್ತಿ ಗೀತೆ,ನಾಡಗೀತೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸ್ನೇಹಜ್ಯೋತಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ಕಾರ್ಯದರ್ಶಿ, ತಾಲೂಕು ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷ ಸಂತೋಷ್ ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಸಂತೋಷ್, ಮಕ್ಕಳ ಶಿಕ್ಷಣ ಮತ್ತು ಪ್ರತಿಭೆಯನ್ನು ಗುರುತಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಪ್ರತಿಭೆ ಪ್ರೋತ್ಸಾಹಿಸುವ ಬಗ್ಗೆ ಈ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.

ಮನೆ ಬಾಗಿಲು ಮುರಿದು ನಗದು ಕಳವು
ಗುಬ್ಬಿ: ಇಲ್ಲಿನ ಮಹಾಲಕ್ಷ್ಮಿ ಬಡಾವಣೆಯ ಮನೆಯೊಂದರಲ್ಲಿ ಹಾಡ ಹಗಲೇ ಕಳ್ಳತನವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದಿರುವ  ಸಮಯದಲ್ಲಿ ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು 50 ಸಾವಿರ ಮೌಲ್ಯದ ನಗದು ಮತ್ತು ಒಡವೆ ಕಳ್ಳತನ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮನೆಯ ಮಾಲೀಕ ತರಕಾರಿ ವ್ಯಾಪಾರಿ ರಮೇಶ್ ಎಂದಿನಂತೆ ತರಕಾರಿ ವ್ಯಾಪಾರಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದಿರುದನ್ನು ಮನಗಂಡು ಮಧ್ಯಾಹ್ನದ ಸಮಯದಲ್ಲಿ ಹಿಂಬಾಗಿಲಿನಿಂದ ಒಳ ನುಗ್ಗಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement