ಮಟ್ಕಾ ದಂಧೆ ದಮನಕ್ಕೆ ಬದ್ಧ: ಶಾಸಕ ಕೆ.ಎಂ. ತಿಮ್ಮರಾಯಪ್ಪ
ತುಮಕೂರು: ಮಟ್ಕಾ ನಿಯಂತ್ರಣ ಮಾಡಬೇಕಾದ ಕರ್ತವ್ಯ ಪೊಲೀಸರದ್ದು ಎಂದು ಪಾವಗಡ ಶಾಸಕ ಕೆ.ಎಂ.ತಿಮ್ಮರಾಯಪ್ಪ ಪ್ರತಿಪಾದಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಾಮಾಜಿಕ ಪಿಡುಗಾಗಿರುವ ಮಟ್ಕಾ ದಂಧೆ ಮಟ್ಟ ಹಾಕಲು ಬದ್ಧ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು. ಪಾವಗಡ ತಾಲೂಕಿನಲ್ಲಿ ಮಟ್ಕಾ ದಂಧೆ ನಡೆಸುವ ದೊಡ್ಡ ಜಾಲವೇ ಇದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುವುದಾಗಿ ತಿಳಿಸಿದರು.ನೀರಿನದ್ದೇ ಸಮಸ್ಯೆ: ಪಾವಗಡದಲ್ಲಿ ಶುದ್ಧ ಕುಡಿಯುವ ನೀರಿನದ್ದೇ ಸಮಸ್ಯೆ. ಡಿ ಪ್ಲೋರೈಡ್ ಘಟಕಗಳ ಅವಶ್ಯಕತೆಯಿದೆ. ನಕ್ಸಲ್ ವಿಶೇಷ ಪ್ಯಾಕೇಜ್ ಸಮರ್ಪಕವಾಗಿ ಬಳಕೆಯಾಗಿದೆಯೇ, ಇಲ್ಲವೇ ಎಂಬುದನ್ನು ನೋಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.