ವರದಕ್ಷಿಣೆ ದಾಹಕ್ಕೆ ಗರ್ಭಿಣಿ ಬಲಿ
ಕುಣಿಗಲ್: ವರದಕ್ಷಿಣೆ ದಾಹಕ್ಕೆ ಗರ್ಭಿಣಿ ಬಲಿಯಾಗಿರುವ ಘಟನೆ, ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಇಪ್ಪಾಡಿ ಗ್ರಾಮದ ಬಸವರಾಜು ಎಂಬುವರ ಮಗಳಾದ ನಾಗರತ್ನ(23) ಎಂದು ಗುರುತಿಸಲಾಗಿದ್ದು, ಈಕೆಯನ್ನು ಕಳೆದ ಎರಡು ವರ್ಷದ ಹಿಂದೆ ನಾಗನಹಳ್ಳಿ ಗ್ರಾಮದ ಪುಟ್ಟಯ್ಯ ಎಂಬುವರ ಮಗ ರಮೇಶ್ಗೆ ವಿವಾಹ ಮಾಡಿಕೊಟ್ಟಿದ್ದು, ನಾಗರತ್ನ ಐದು ತಿಂಗಳ ಗರ್ಭಿಣಿಯಾಗಿದ್ದಳು, ಇತ್ತೀಚೆಗೆ ಪತಿ, ಸೇರಿದಂತೆ ಅತ್ತೆ, ಮಾವ, ನಾದಿನಿ ಹಾಗೂ ನಾದಿನಿ ಗಂಡ, ನಾಗನಹಳ್ಳಿಯಲ್ಲಿ ಮನೆ ನಿರ್ಮಿಸುವ ಸಲುವಾಗಿ ವರದಕ್ಷಿಣೆ ತರುವಂತೆ ತೀವೃವಾಗಿ ಕಿರುಕುಳ ನೀಡುತ್ತಿದ್ದು, ಶನಿವಾರ ಬೆಳಗ್ಗೆ ಇದರಿಂದ ತೀವ್ರ ಘಾಸಿಗೊಂಡ ನಾಗರತ್ನ ನಾಗನಹಳ್ಳಿಯ ಹೊಲದ ಬಳಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತಮೃತಳ ತಂದೆ ಬಸವರಾಜು ಕುಣಿಗಲ್ ಠಾಣೆಗೆ ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಆಕೆ ಸತ್ತಿದ್ದಾಳೆಂದು ಮಾವ ಪುಟ್ಟಯ್ಯ, ಅತ್ತೆ ಜಯಮ್ಮ, ಗಂಡ ರಮೇಶ್ ಹಾಗೂ ನಾದಿನಿ, ನಾದಿನಿಯ ಗಂಡನ ಮೇಲೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಕುಣಿಗಲ್ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.