ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅರಿಶಿನ ಕಳವು: ಮೂವರ ಬಂಧನ

Rashmi Kasaragodu
Updated On : 28 May 2013, 12:17 pm

ಚಾಮರಾಜನಗರ: ಗೋಡೌನ್ನಲ್ಲಿ ಸಂಗ್ರಹಿಸಲಾಗಿದ್ದ ಅರಿಶಿನ ಕಳವು ಮಾಡಿದ್ದ ಮೂವರನ್ನು ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಉತ್ತವಳ್ಳಿ ಗ್ರಾಮದ ರಾಜು ಎಂಬುವರ ಗೊಡೌನ್ನಲ್ಲಿ ಸಂಗ್ರಹಿಸಿಡಲಾಗಿದ್ದ 1 ಲಕ್ಷ ಮೌಲ್ಯದ 16 ಕ್ವಿಂಟಾಲ್ ಅರಿಶಿನ ಮೇ 21ರಂದು ಕಳವಾಗಿತ್ತು. ಈ ಸಂಬಂಧ ಅವರು ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಉತ್ತವಳ್ಳಿಯ ಮಹದೇವಸ್ವಾಮಿ, ರಾಮು ಮತ್ತು ಮಲ್ಲೇಶನಾಯಕ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಸಿಪಿಐ ಶೇಖರ್, ಪಿಎಸ್ಐ ಶ್ರೀಕಾಂತ್ ಮತ್ತು ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement