ನಕ್ಸಲ್ ಕೃತ್ಯ ಖಂಡಿಸಿ ಪ್ರತಿಭಟನೆ
ಹಾಸನ: ಛತ್ತೀಸ್ಗಡ್ನಲ್ಲಿ ನಡೆದ ನಕ್ಸಲರ ಕುಕೃತ್ಯವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವಾತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಆರ್.ಸಿ.ರಸ್ತೆ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ರಾಷ್ಟ್ರದ ಆಂತರಿಕ ಭದ್ರತೆಗೆ ಸವಾಲಾಗಿರುವ ನಕ್ಸಲೀಯರು ತಮ್ಮ ಅಮಾನುಷ ಕೃತ್ಯಗಳನ್ನು ಮುಂದುವರಿಸಿದ್ದು, ಛತ್ತೀಸ್ಗಡದ ಬಸ್ತರ್ ಜಿಲ್ಲೆಯಲ್ಲಿ ನೆಲಬಾಂಬ್ ಸಿಡಿಸಿ ಹಾಗೂ ಗುಂಡಿನ ಮಳೆಗರೆದು ಕಾಂಗ್ರೆಸ್ ನಾಯಕರು, ನಕ್ಸಲರ ವಿರುದ್ಧ ಹೋರಾಟಕ್ಕೆ ಸಲ್ವಾಜುದುಂ ಸಂಘಟನೆ ಸ್ಥಾಪಿಸಿದ್ದ ಮಹೇಂದ್ರ ಕರ್ಮಾ ಸೇರಿದಂತೆ ಸುಮಾರು 20 ಜನರನ್ನು ಹತ್ಯೆ ಮಾಡಿರುವ ಕ್ರಮ ಖಂಡನೀಯಾಗಿದೆ ಎಂದರು.