ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಗೀತೋತ್ಸವದಲ್ಲಿ ಹಲವರಿಗೆ ಸನ್ಮಾನ

Rashmi Kasaragodu
Updated On : 28 May 2013, 12:17 pm

ರಾಮನಾಥಪುರ: ರಾಮನಾಥಪುರ ಹೋಬಳಿ ಸಂಗೀತ ಗ್ರಾಮ ರುದ್ರಪಟ್ಟಣದ ಹತ್ತಿರವಿರುವ ಕಾವೇರಿ ನದಿಯ ದಂಡೆಯಲ್ಲಿ ಎರಡು ಗಂಟೆಗಳ ಕಾಲ ನಿರಂತರ ತ್ಯಾಗರಾಜರ ಪಂಚಕೃತಿಗಳ ಗೋಷ್ಠಿಗಾಯನ ನಡೆಯಿತು. ನದಿ ದಂಡೆಯಲ್ಲಿ ನಡೆಯುವ ತೆಪ್ಪೋತ್ಸವದ ನಂತರ ಸನ್ಮಾನ ಕಾರ್ಯಕ್ರಮ ಜರುಗಿತು. ಶಾಸಕ ವಾಲೆ ಮಂಜು ಅವರ ಪತ್ನಿ ತಾರಾ ಮಂಜು, ತುಮಕೂರು ವಿಶ್ವವಿದ್ಯಾಲಯ ಕುಲಪತಿ ಗಾನಕಲಾ ಶರ್ಮ ಅವರಿಗೆ ನಾಚಾರಮ್ಮ ಪ್ರಶಸ್ತಿ ಹಾಗೂ ಗಾನಕಲಾ ಸ್ವರ್ಷಮಣಿ ಬಿರುದು ಪ್ರದಾನ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಡಾ ಮಲ್ಲೇಪುರಂ ಬಿ. ವೆಂಕಟೇಶ್, ಸಂಗೀತ ವಿದ್ವಾನ್ ಅರಳು ಮಲ್ಲಿಗೆ ಪಾರ್ಥಸಾರಥಿ, ಡಾ. ಜಿ. ವೆಂಕಟೇಶ್ ಹಾಗೂ ವಿದ್ವಾನ್ ಅರ್.ಕೆ. ಪದ್ಮನಾಭ ಹಾಗೂ ವಿದ್ವಾನ್ ಅರ್.ಕೆ. ಪದ್ಮನಾಭ ಪತ್ನಿ ವಿಜಯಲಕ್ಷಿ, ಸಮಾಜ ಸೇವಕ ಲಕ್ಕಪ್ಪ ಮುಂತಾದವರಿಗೆ ಸನ್ಮಾನಿಸಲಾಯಿತು.
ಮಹಿಳೆಯರಿಗೆ ಉಚಿತ ತರಬೇತಿ
ಹಾಸನ: ಕುವೆಂಪುನಗರದಲ್ಲಿ ಜನತಾಬಜಾರ್ ಹತ್ತಿರ ಇರುವ ಜೀವನ ಕೌಶಲ ತರಬೇತಿ ಕೇಂದ್ರದಲ್ಲಿ 14 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಟೈಲರಿಂಗ್, ಬ್ಯೂಟಿಷಿಯನ್ ಮತ್ತು ಮೆಹಂದಿ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ಜೂ.1ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಪ್ರತಿ ತರಗತಿಗಳಿಗೆ 20 ಜನರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ. ಆಸಕ್ತರು ಮೊ.ಸಂ. 94494 28824 ಸಂಪರ್ಕಿಸಿ.
ರಂಗ  ಡಿಪ್ಲೋಮಾ:
ಅರ್ಜಿ ಆಹ್ವಾನ
ಹಾಸನ: ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಶಿಕ್ಷಣದ ಅವಧಿ ಒಂದು ವರ್ಷದ್ದಾಗಿದ್ದು ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ., ಪದವೀಧರರಿಗೆ ಆದ್ಯತೆಯುಂಟು. ತರಬೇತಿ ಅವಧಿಯಲ್ಲಿ ಊಟ, ವಸತಿ ವ್ಯವಸ್ಥೆ ನೀಡಲಾಗುತ್ತಿದೆ. ರಾಜ್ಯ ಹಾಗೂ ಭಾರತದ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ ತರಗತಿಗಳು ನಡೆಯುತ್ತವೆ ಎಂದು ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ  ಸಾಣೇನಹಳ್ಳಿಯ ಶಿವಕುಮಾರ ರಂಗ  ಪ್ರಯೋಗ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ. ಜುಲೈ 1 ಸೋಮವಾರ ಮತ್ತು 2 ಮಂಗಳವಾರ ಬೆಳಗ್ಗೆ 10 ಕ್ಕೆ ಸಾಣೇನಹಳ್ಳಿಯ ರಂಗಪ್ರಯೋಗ ಶಾಲೆಯಲ್ಲಿ ಸಂದರ್ಶನ ನಡೆಯಲಿದೆ. ಜುಲೈ 15ರಿಂದ ತರಗತಿಗಳು ಪ್ರಾರಂಭವಾಗುತ್ತದೆ. ಮಾಹಿತಿಗಾಗಿ ನಟರಾಜ ಹೊನ್ನವಳ್ಳಿ, ಪ್ರಾಚಾರ್ಯರು, ಶಿವಕುಮಾರ ರಂಗಪ್ರಯೋಗ ಶಾಲೆ, ಸಾಣೇಹಳ್ಳಿ-577515, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement