ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ.ಡಿ. ಶ್ರೀನಿವಾಸ್
ಮಧುಗಿರಿ: ಮಧುಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 20, 21 ರಂದು ಹಮ್ಮಿಕೊಂಡಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಲೇಖಕ, ಇತಿಹಾಸ ತಜ್ಞ ಎಂ.ಡಿ. ಶ್ರೀನಿವಾಸ್ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಾ.ಕಸಾಪ ಪದಾಧಿಕಾರಿಗಳು ತುಮಕೂರಿನಲ್ಲಿ ವಾಸಗಿರುವ ಎಂ.ಡಿ.ಶ್ರೀನಿವಾಸ್ ಅವರ ಮನೆಗೆ ತೆರಳಿ ಬೇಟಿ ಮಾಡಿ ಸನ್ಮಾನಿಸಿ ಫಲ,ಪುಷ್ಪ ತಾಂಬೂಲು ನೀಡಿ ಯಶಸ್ವಿಯಾಗಿ ಸಮ್ಮೇಳನ ನಡೆಸಿ ಕೊಡುವಂತೆ ಆಹ್ವಾನಿಸಿದರು. ಸಮ್ಮೇಳನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ ಮನೆಗೆ ಆಗಮಿಸಿ ಅಧಿಕೃತ ಅಮಂತ್ರಣ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ, ಎಂ.ಡಿ.ಶ್ರೀನಿವಾಸ್ ಕನ್ನಡ ನಾಡು, ನುಡಿ ಭಾಷೆಗೆ ಸಾವಿರಾರು ವರ್ಷ ಇತಿಹಾಸವಿದೆ.ಅದಕ್ಕೆ ಎಂದೆಂದಿಗೂ ಧಕ್ಕೆ ಬಾರದಂತೆ ಎಲ್ಲರೂ ನಡೆದುಕೊಳ್ಳುವ ನಿಟ್ಟಿನಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ, ರಕ್ಷಣೆಗೆ ಶ್ರಮಿಸಬೇಕಿದೆ ಎಂದರು. ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ,ಉಪಾಧ್ಯಕ್ಷ ಎನ್.ಮಹಾಲಿಂಗೇಶ್, ಕಾರ್ಯದರ್ಶಿ ಅಮರಾವತಿ ದ್ರೇಹಚಾರಿ, ಪ್ರೊ.ಮ.ಲ.ನ.ಮೂರ್ತಿ, ಬಂಡಿಚೌಡಯ್ಯ, ಮಂಡಿ ಬಸವರಾಜು, ಎಂ.ಜಿ.ರಘು, ಸಹನಾ ನಾಗೇಶ್, ಅನಂತು, ಶಕುಂತಲಾ ಗುಂಡೂರಾವ್ ಇನ್ನು ಅನೇಕರು ಇದ್ದಾರೆ.