ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾಜಿ ಸೈನಿಕರ ಆರೋಗ್ಯ ತಪಾಸಣೆ

Rashmi Kasaragodu
Updated On : 29 May 2013, 12:09 pm

ತುಮಕೂರು: ಇಸಿಹೆಚ್‌ಎಸ್ ತುಮಕೂರು ವತಿಯಿಂದ ಜೂನ್ 1 ರ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ತಿಪಟೂರು ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಬಾಲಿಕಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದೆ. ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಎಲ್ಲಾ ಮಾಜಿ  ಸೈನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಕೋರಲಾಗಿದೆ.
ಪೋಷಣೆಗಾಗಿ
ದಾಖಲುಪಡಿಸಿ
ತುಮಕೂರು ಜಿಲ್ಲೆಯಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನ ಪಡೆಯುತ್ತಿರುವ ನಿರ್ಗತಿಕ ಮಕ್ಕಳ ಕುಟೀರಗಳಿಗೆ ಸಂಕಷ್ಟದಲ್ಲಿರುವ ಅನಾಥ ಮತ್ತು ಏಕಪೋಷಕ ಮಕ್ಕಳನ್ನು ಪಾಲನೆ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣಕ್ಕಾಗಿ ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಅಂತಹ ಮಕ್ಕಳನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪೋಷಕರು ಹಾಜರುಪಡಿಸಬೇಕು. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸಭೆಯನ್ನು ನಡೆಸಲು ಆಯೋಜಿಸಲಾಗಿದ್ದು, ನಿಗದಿಪಡಿಸಿದ ದಿನಾಂಕದಂದು ನಿಗದಿಪಡಿಸಿದ ಸ್ಥಳಕ್ಕೆ ಪೋಷಕರು ಸಂಕಷ್ಟದಲ್ಲಿರುವ ಮಕ್ಕಳೊಂದಿಗೆ ಹಾಜರಾಗಲು ಕೋರಿದೆ. ಜೂನ್ 1 ರಂದು ಬೆಳಿಗ್ಗೆ 11 ಗಂಟೆಗೆ ತಿಪಟೂರು, ಶಿರಾ, ಕುಣಿಗಲ್ ಸಿ.ಡಿ.ಪಿ.ಓ. ಕಚೇರಿ, ತುಮಕೂರು ಬಾಲಕಿಯರ ಬಾಲಮಂದಿರ, ಅಮರಜ್ಯೋತಿ ನಗರ, ತುಮಕೂರು. ಜೂನ್ 4 ರಂದು ಬೆಳಿಗ್ಗೆ 11 ಗಂಟೆಗೆ  ಚಿಕ್ಕನಾಯಕನಹಳ್ಳಿ, ಮುಧುಗಿರಿ ಸಿ.ಡಿ.ಪಿ.ಓ. ಕಚೇರಿ, ತುಮಕೂರು ಬಾಲಕಿಯರ ಬಾಲಮಂದಿರ, ಅಮರಜ್ಯೋತಿ ನಗರ, ತುಮಕೂರು. ಜೂನ್ 5 ರಂದು  ಬೆಳಿಗ್ಗೆ 11 ಗಂಟೆಗೆ ಗುಬ್ಬಿ, ಪಾವಗಡ ಸಿ.ಡಿ.ಪಿ.ಓ. ಕ:ಕೇರಿ. 11 ರಂದು  ಬೆಳಿಗ್ಗೆ 11 ಗಂಟೆಗೆ ಕೊರಟಗೆರೆ, ತುರುವೇಕೆರೆ  ಸಿ.ಡಿ.ಪಿ.ಓ. ಕಚೇರಿ.
ಕೋರ್ಸಿಗೆ ಅರ್ಜಿ
ಆಹ್ವಾನ
ಪ್ರಸಕ್ತ 2013-14 ನೇ ಸಾಲಿಗಾಗಿ ಜಿಟಿಟಿಸಿ, ತುಮಕೂರು ಕೇಂದ್ರದಿಂದ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸಿನ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ  ಪರೀಕ್ಷೆಯಲ್ಲಿ ಒಟ್ಟಾರೆ ಶೇ.35 ರಷ್ಟು ಅಂಕಗಳನ್ನು  ಪಡೆದು ಉತ್ತೀರ್ಣರಾಗಿರುವ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮತ್ತು ಗಡಿನಾಡು, ಹೊರನಾಡು ಕನ್ನಡಿಗ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು  ಸಲ್ಲಿಸಲು ಕೊನೆಯ ದಿನಾಂಕ ಮೇ 31. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಹಳೇ ಡಿಐಟಿಸಿ ಬಿಲ್‌ಡಿಂಗ್, ಹಿರೇಹಳ್ಳಿ ಕೈಗಾರಿಕಾ ವಸಹತು, ತುಮಕೂರು- ದೂರವಾಣಿ ಸಂಖ್ಯೆ 9141630322 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement