ಸಾಲದ ಬಾಧೆ: ರೈತ ಆತ್ಮಹತ್ಯೆ
ಶಿರಾ: ತಾಲೂಕಿನಲ್ಲಿ ತೀವ್ರ ಬರಗಾಲದ ಬವಣೆಯಿಂದ ಮತ್ತು ಸಾಲದ ಬಾಧೆ ತಾಳಲಾರದೆ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ರೈತರು ವಿಷ ಸೇವಿಸಿದ್ದು ಒಬ್ಬ ಮೃತಪಟ್ಟು ಇನ್ನೊಬ್ಬ ಅಸ್ವಸ್ಥಗೊಂಡು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಕೆಂಚಪ್ಪ (59) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು ಕೃಷಿಯನ್ನೆ ನಂಬಿದ್ದ ಈತನೆಗೆ ಸುಮಾರು 1.5 ಎಕರೆ ಅಡಿಕೆ ತೋಟವಿದ್ದು ಮಳೆ ಬಾರದೆ ಇದ್ದರಿಂದ ಸಾಲ ಮಾಡಿ ಕೊಳವೆಬಾವಿ ಕೊರೆಸಿದ್ದರೂ ನೀರು ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ಭೂವನಹಳ್ಳಿ ಗ್ರಾಮದ ಮಂಜುನಾಥ್ (55) ಬರಗಾಲದ ಬವಣೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಈತನನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ.