ಸಿಎಂ ಉತ್ತಮ ಆಡಳಿತ ನೀಡಲು ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ, ಕೊರಟಗೆರೆ, ಮೇ 28
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಲಿ ಎಂದು ತಾಲೂಕಿನ ಭಕ್ತರಹಳ್ಳಿ ಮತ್ತು ನಾಗರಹಳ್ಳಿ ಗ್ರಾಮಸ್ಥರು ಗ್ರಾಮದೇವತೆಯಾದ ಗೋಪಾಲಕೃಷ್ಟಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ಪೂಜಾ ಕಾರ್ಕ್ರಮದ ನಂತರ ಸುತ್ತಮುತ್ತಲ ಗ್ರಾಮದ ಜನರಿಗೆ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಗತಿಪರ ಪದವೀಧರ ವೇದಿಕೆಯ ತಾಲೂಕು ಅಧ್ಯಕ್ಷ ನಟರಾಜು, ಲಕ್ಷ್ಮೀಕಾಂತ್, ಕನಕ ಯವಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು, ತಾಲೂಕು ಅಧ್ಯಕ್ಷ ರಂಗಧಾಮಯ್ಯ, ಮುಖಂಡರಾದ ಎಸ್ ಎಲ್ ಎನ್ ಸ್ವಾಮಿ, ಉಮಾಶಂಕರ್, ನಂಜಪ್ಪ, ಪ್ರಕಾಶ್, ಪರಮೇಶ್, ಭೀಮಣ್ಣ, ರಂಗಧಾಮಯ್ಯ, ರಂಗನಾಥ್ ಉಪಸ್ಥಿತರಿದ್ದರು