ಇಂದಿನಿಂದ ಹನುಮ ಜಯಂತಿ ಮಹೋತ್ಸವ
ತಿಪಟೂರು: ನಗರದ ಕೋಟೆ ಶ್ರೀ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನದ ಹನುಮ ಜಯಂತಿ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಜೂ.5ರವರೆಗೆ ಅದ್ಧೂರಿಯಾಗಿ ನಡೆಯಲಿವೆ. ಧ್ವಜಾರೋಹಣ, ಅಂಕುರಾರ್ಪಣೆ, ದೀಕ್ಷಾ ಸ್ವೀಕಾರ, ಗಣಪತಿ ಹೋಮ ಮತ್ತಿತರ ಹೋಮಾದಿಗಳು ನಡೆಯುತ್ತವೆ. ಮೇ 31ರಂದು ಶ್ರೀ ರುದ್ರಹೋಮ, ಜೂ.1 ಶ್ರೀ ಹರಿವಾಯುಸ್ತುತಿ ಪುನಶ್ಚರಣ ಹೋಮ, ಜೂ.2 ರಥಾಂಗ ಹೋಮ ಹಾಗೂ ಕಲ್ಯಾಣೋತ್ಸವ ಜೂ.3 ಶ್ರೀ ಹನುಮಜ್ಜಯಂತಿ, ಪವಮಾನ ಹೋಮ, ಅನ್ನಸಂತರ್ಪಣೆ, ಶ್ರೀ ಸ್ವಾಮಿಯವರ ಉತ್ಸವವು ನಡೆಯಲಿದೆ. ಜೂ.4 ಏಕಾದಶಿ ಆಚರಣೆ. ಜೂ.5 ಅವಭೃತೋತ್ಸವ, ದೀಕ್ಷಾ ವಿಸರ್ಜನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿ ತಿಳಿಸಿದೆ.