ಇಂದು ಡಾ. ವೆಂಕಟೇಶಲುಗೆ ಬೀಳ್ಕೊಡುಗೆ
ತುಮಕೂರು: ತುಮಕೂರಿನ ಹೆಚ್ಎಂಟಿಯ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಿಜಿಎಂ (ಹೆಚ್ಆರ್) ಡಾ. ಜಿ. ವೆಂಕಟೇಶಲು ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಮೇ 31 ರಂದು ಸಂಜೆ 6 ಗಂಟೆಗೆ ಸಿದ್ದರಾಮೇಶ್ವರ ಬಡಾವಣೆಯ ಬಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಚಾಲಕ ಬಿ.ಎಲ್. ರವೀಂದ್ರಕುಮಾರ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಚ್.ಎನ್. ಶಂಕರಯ್ಯ, ಕುಪ್ಪೂರು ಕೃಷ್ಣಮೂರ್ತಿ, ರೇವಣ್ಣಸಿದ್ದಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಹೆಚ್ಎಂಟಿ ಜನರಲ್ ಮ್ಯಾನೇಜರ್ ಗಜಾನನ ಡಿ. ದೇವಗಿರಿಕರ್ ವಹಿಸಲಿದ್ದಾರೆ.