ನೋಡಿ ಚೀಫ್ ಆಫೀಸರ್ರೆ, ನಾನು ಗುದ್ದಲಿ ಹಿಡ್ಕೋತ್ತೀನೀ...
ಕುಣಿಗಲ್: ನೋಡಿ ಚೀಫ್ ಆಫೀಸರ್ರೆ ... ನಾನು ಗುದ್ದಲಿ ಹಿಡ್ಕೋತ್ತೀನೀ.. ನೀವು ಪರಕೆ ಹಿಡ್ಕೊಂಡು ಸ್ವಚ್ಛತೆಗೆ ಇಳಿಯ ಬೇಕಾಗುತ್ತದೆ ಎಂದು ಶಾಸಕ ಡಿ.ನಾಗರಾಜಯ್ಯ, ಪುರಸಭೆ ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದ ಘಟನೆ ಗುರುವಾರ ಡೇಂಘಿ ನೀಯಂತ್ರಣ ಕ್ರಮಗಳ ಸಭೆಯಲ್ಲಿ ನಡೆಯಿತು. ಪುರಸಭೆಯಲ್ಲಿ ಒಟ್ಟಾರೆ ನಲವತ್ತಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ, ಪರಿಣಾಮಕಾರಿಯಾಗಿ ಕಸ ವಿಲೆವಾರಿಯಾಗದೆ ಪಟ್ಟಣ ಕಸದತೊಟ್ಟಿಯಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇದರಿಂದಾಗಿ ಹಲವು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದರೂ, ಪುರಸಬೆ ಸ್ವಚ್ಛತೆಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಶನಿವಾರ ಹಾಗೂ ಭಾನುವಾರ ತಾವು ಹಾಗೂ ತಹಸೀಲ್ದಾರ್ ಪುರಸಭೆಯ ನೈರ್ಮಲ್ಯ ನಿರ್ವಹಣೆಯ ಕಾರ್ಯ ವೀಕ್ಷಿಸಲು ಖುದ್ದಾಗಿ ಅಗಮಿಸುವುದಾಗಿ ಮುಖ್ಯಾಧಿಕಾರಿ ಶುಭಾ ಅವರಿಗೆ ತಿಳಿಸಿದರು.