ಭಕ್ತರಿಗೆ ಉಚಿತ ಯಾತ್ರಿ ನಿವಾಸ
ರಾಮನಾಥಪುರ: ಇಲ್ಲಿಯ ಪಟ್ಟಾಭಿರಾಮಸ್ವಾಮಿ ದೇವಸ್ಥಾನದ ದೇವರ ದರ್ಶನಕ್ಕೆ ದೂರದಿಂದ ಬರುವ ಭಕ್ತರು ಇಲ್ಲಿ ಉಳಿಯಲು ದೇವಸ್ಥಾನದ ಪಕ್ಕದಲ್ಲಿರುವ ಕಾವೇರಿ ಯಾತ್ರಿ ನಿವಾಸವನ್ನು ಸಮಾಜ ಸೇವಕ ಹಳ್ಳಿಮೈಸೂರು ನಾಗರಾಜು ಅವರು ಇತ್ತೀಚೆಗೆ ನಿರ್ಮಿಸಿ ಭಕ್ತರಿಗೆ ಸಹಕಾರಿಯಾಗಿದ್ದಾರೆ. ಹಳ್ಳಿಮೈಸೂರು ದಿ. ಹೆಚ್.ಅರ್. ನಂಜುಡಯ್ಯ ಹಾಗೂ ಅವರ ಪತ್ನಿ ಎಚ್.ಅರ್. ಸರಸ್ವತಮ್ಮ ಅವರ ಜ್ಞಾಪಕಾರ್ಥ ಇಲ್ಲಿಯ ಪಟ್ಟಾಭಿರಾಮಸ್ವಾಮಿ ಹಾಗೂ ಮುಂತಾದ ದೇವಸ್ಥಾನಗಳಿಗೆ ಪ್ರವಾಸಿಗರು ಹಾಗೂ ಭಕ್ತರು ಬಂದು ತಂಗಲು 50 ಲಕ್ಷ ರು ವೆಚ್ಚದಲ್ಲಿ 2 ಅಂತಸ್ತಿನ 2 ಹಾಲ್ ಹಾಗೂ 6 ಕೊಠಡಿಗಳ ವ್ಯವಸ್ಥೆ ಮಾಡಿದ್ದಾರೆ.