ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಮಮಂದಿರ ದೇವಸ್ಥಾನದಲ್ಲಿ ಕಲಿಕಾ ಶಿಬಿರ

Rashmi Kasaragodu
Updated On : 30 May 2013, 11:58 am

ತಿಪಟೂರು: ನಗರದ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ನವರ ಸುರಭಿ ಹಾಗೂ ಶ್ರೀ ಶಂಕರ ಟ್ರೈನಿಂಗ್ ಆಶ್ರಯದಲ್ಲಿ ಜೂ.7ರಿಂದ 9ರವರೆಗೆ ಮೂರು ದಿವಸ ಬನ್ನಿ ನಮ್ಮ ಹಾಡಿಗೆ ಆನಂದ ಕಂದ ವಿರಚಿತ ಭಾವಗೀತೆಗಳ ಕಲಿಕಾ ಶಿಬಿರವನ್ನು ಖ್ಯಾತ ಗಾಯಕ ಮೃತ್ಯುಂಜಯ ದೊಡ್ಡವಾಡ್ ಅವರ ಸಂಗೀತ ನಿರ್ದೇಶನದಲ್ಲಿ ಆಯೋಜಿಸಲಾಗಿದೆ.  ಈ ಕಲಿಕಾ ಶಿಬಿರವು ಗಾಯಕರಾದ ಶ್ರೀಧರ್ ಅಯ್ಯರ್ ಸಾರಥ್ಯದಲ್ಲಿ ನಡೆಯಲಿದ್ದು, ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಲಿದ್ದು, ಶಿಬಿರದಲ್ಲಿ ಮ್ಯೂಸಿಕ್ನೊಂದಿಗೆ ಭಾವಗೀತೆಗಳನ್ನು ಕಲಿಸಲಾಗುವುದು. ಎಲ್ಲಾ ವಯೋವಾನದವರೂ ಭಾಗವಹಿಸಬಹುದು ಎಂದು ಪ್ರಾಯೋಜಕ ಶಿವಪ್ರಕಾಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9945106366, 9164193066 ಅಥವಾ 08134-251943 ಸಂಪರ್ಕಿಸಬಹುದು.
ಇಂದು ಸಮುದಾಯ ಸಂಘಟನಾ ಕಾರ್ಯ
ತುಮಕೂರಿನ ಎಂಜಿ ರಸ್ತೆಯಲ್ಲಿರುವ ಗುರುಶ್ರೀ ಕಾಮರ್ಸ್ ಕಾಲೇಜು ವತಿಯಿಂದ ಮೇ 31 ರಂದು ಮಧ್ಯಾಹ್ನ 1-30 ಕ್ಕೆ ಶಿರಾದ ಚಿಕ್ಕನಹಳ್ಳಿಯ ಸುವರ್ಣ ಗ್ರಾಮೋದಯ ಸಮುದಾಯ ಭವನದಲ್ಲಿ ಸಮುದಾಯ ಸಂಘಟನಾ ಕಾರ್ಯ ಏರ್ಪಾಟಾಗಿದೆ. ಮಹಿಳೆಯರ, ಮಕ್ಕಳ ಮೇಲಿನ ಹಿಂಸೆ ಮತ್ತು ದೌರ್ಜನ್ಯ ತಡೆಯುವಲ್ಲಿ ಕಾನೂನುಗಳ ಪಾತ್ರ, ಮದ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಾಟಾಗಿದೆ. ಸಮಾರಂಭವನ್ನು ಚಿಕ್ಕನಹಳ್ಳಿ ಎಸ್ಕೆವಿಡಿ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಎನ್. ನಾಗಪ್ಪ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್, ತುಮಕೂರಿನ ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಮುತ್ತುರಾಯಪ್ಪ ಪಾಲ್ಗೊಳ್ಳಲ್ಲಿದ್ದಾರೆ. ಚಿಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಹೆಚ್.ಜಿ. ಬಸವರಾಜು, ಪ್ರೊ. ಟಿ. ಗಂಗಾಧರಯ್ಯ, ಚಿಕ್ಕನಹಳ್ಳಿ ಪಿಡಿಓ  ಎನ್. ಶರತ್ಚಂದ್ರ ಪಾಲ್ಗೊಳ್ಳಲ್ಲಿದ್ದಾರೆ.
ನಾಳೆ ಮೈಲಾರ ಮಹದೇವ ನಾಟಕ
ತುಮಕೂರು: ಜೂ. 1 ರಂದು ಸಂಜೆ 7 ಗಂಟೆಗೆ ಮೆಳೆಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಮೈಲಾರ ಮಹಾದೇವ ನಾಟಕ ಏರ್ಪಾಟಾಗಿದೆ. ಡಮರುಗ ಸಂಪನ್ಮೂಲ ಕೇಂದ್ರದ ವತಿಯಿಂದ ಈ ರಂಗ ಪ್ರಯೋಗ ಏರ್ಪಾಟಾಗಿದ್ದು, ಡಮರುಗ ರಂಗ ಸಂಪನ್ಮೂಲ ಕೇಂದ್ರ ಪ್ರಸ್ತುತ ಪಡಿಸಲಿದೆ. ಮೆಳೇಹಳ್ಳಿ ದೇವರಾಜ್ ನಾಟಕ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement