'ಗುಟ್ಕಾ ಮಾರಾಟ ನಿಷೇಧಿಸಿದ ಸರ್ಕಾರದ ಕ್ರಮ ಶ್ಲಾಘನೀಯ'
ತುಮಕೂರು: ಗುಟ್ಕಾ ಮಾರಾಟ ನಿಷೇಧಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಎಂದು ಡಾ. ಇಂತಿಯಾಜ್ ಅಹಮದ್ ಅಭಿಪ್ರಾಯಪಟ್ಟರು.
ತುಮಕೂರು ಗೂಳೂರಿನ ಸುಫಾ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ತಂಬಾಕು ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುಟ್ಕಾ ಸೇವನೆಯಿಂದ ಜನರು ಕ್ಯಾನ್ಸರ್ ಸೇರಿದಂತೆ ಹಲವು ರೊಗಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರ ಜನರ ಆರೋಗ್ಯಕ್ಕೆ ಮಾರಕವಾಗಿರುವ ಗುಟ್ಕಾ, ಪಾನ್ ಮಸಾಲ ಸೇರಿದಂತೆ ನಿಕೋಟಿನ್ ಮತ್ತು ತಂಬಾಕು ಅಂಶವಿರುವ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿರುವುದು ಶ್ಲಾಘನೀಯವೆಂದು ಹೇಳಿದರು. ಪ್ರಸ್ತುತ ಸಮಾಜದಲ್ಲಿ ಸಂಕೀರ್ಣ ಪರಿಸ್ಥಿತಿಗಳಿಗೆ ಸಿಲುಕಿ ಯುವಜನತೆ ತಂಬಾಕು ಚಟಕ್ಕೆ ಸಿಲುಕಿದ್ದಾರೆ ಹಾಗೂ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತಿದ್ದಾರೆ, ಆರ್ಥಿಕವಾಗಿ ಸಾಮಾಜಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂದು ವಿಷಾದಿಸಿದರು. ಬಂಜಾರ ಮುಖಂಡ ಕುಮಾರ್ ನಾಯಕ್ ಮಾತನಾಡಿ, ಯುವ ಜನತೆ ಕಡ್ಡಾಯವಾಗಿ ತಂಬಾಕು ಸೇವನೆಯನ್ನು ಬಿಟ್ಟು ಕ್ರೀಡೆ, ವಿದ್ಯಾಭ್ಯಾಸ ಹಾಗೂ ವೃತ್ತಿ ಕಲೆಗಳನ್ನು ರೂಢಸಿಕೊಂಡು ಸಮಾಜಭಿವೃದ್ಧಿ ಮಾಡಬೇಕೆಂದು ಕರೆ ನೀಡಿದರು.
ಇರ್ಪಾನ್ ಅಹಮದ್, ಧನಂಜಯ, ಹೇಮಾವತಿ, ಮುನಿರತ್ನ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.