ಟಿಪ್ಪು ಸುಲ್ತಾನ್ ಪುಣ್ಯ ಸ್ಮರಣೆ
ಹುಳಿಯಾರು: ದೇಶದಲ್ಲಿ ಹಿಂದೂ ಧರ್ಮ ಹಾಗೂ ಅಲ್ಪಸಂಖ್ಯಾತ ಧರ್ಮಗಳಲ್ಲಿ ಒಂದಾದ ಮುಸ್ಲಿಂ ಧರ್ಮದವರು ಸದಾಕಾಲ ಅಣ್ಣತಮ್ಮಂದಿರಂತೆ ಎ ಸಹೋದರತ್ವದ ಬಾಂಧವ್ಯ ಮನೋಭಾವ ಹೊಂದಿ ಬಾಳುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಹುಳಿಯಾರಿನ ಟಿಪ್ಪುಸುಲ್ತಾನ್ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಟಿಪ್ಪು ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ಹೋರಾಟ ಮಾಡಿ ಅಳಿದ ದೇಶಭಕ್ತನ ಹೆಸರಲ್ಲಿ ಕೇಂದ್ರ ಸರ್ಕಾರ ಮೈಸೂರಿನಲ್ಲಿ ಟಿಪ್ಪು ಹೆಸರಲ್ಲಿ ವಿಶ್ವವಿದ್ಯಾಲಯ ನಿರ್ಮಿಸಲು ಮುಂದಾಗಿರುವುದು ದೇಶಭಕ್ತರಿಗೆ ಸಲ್ಲಿಸುವ ಗೌರವವಾಗಿದೆ. ಆದರೆ ಕೆಲ ನಾಯಕರು ಇದಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದರು. ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿರಾಮಣ್ಣ, ಎಂ.ಡಿ.ಫಯಾಜ್, ಅಪ್ಸರ್, ಇಮ್ರಾಜ್, ಟಿಪ್ಪು ಯುವಕ ಸಂಘದ ಅಧ್ಯಕ್ಷ ರಫಿಕ್, ಕಾರ್ಯದರ್ಶಿ ಸದ್ದಾಂ, ಚಂದ್ರಣ್ಣ ಸೇರಿದಂತೆ ಇತರರು ಇದ್ದರು.