ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಡೆಂಘೀ ಹಿಮ್ಮೆಟ್ಟಲು ಪರಿಸರ ಸ್ವಚ್ಛವಿಡಿ

Rashmi Kasaragodu
Updated On : 1 Jun 2013, 12:16 pm

ಕ.ಪ್ರ. ವಾರ್ತೆ   ತುಮಕೂರು   ಮೇ 31
ಪರಿಸರ ಸ್ಚಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘೀ ಹಿಮ್ಮೆಟ್ಟಿಸಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ಮನವಿ ಮಾಡಿದ್ದಾರೆ.
ಇಲ್ಲಿನ ತಾಪಂ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನತೆ ಆರೊಗ್ಯದ ಕಡೆಗೆ ಹೆಚ್ಚಿನ ಗಮನ ನೀಡುವಂತೆ ಮನವಿ ಮಾಡಿದ ಅವರು ಪ್ರಸ್ತುತ ಪ್ರಚಲಿತದಲ್ಲಿರುವ ಮಹಾಮಾರಿ ಡೆಂಘೀ ಪ್ರಕರಣವನ್ನು ನಮ್ಮ ನಮ್ಮ ಮನೆ ಸುತ್ತ ಮುತ್ತಲೂ ಇರುವ ಪರಿಸರವನ್ನು ಸ್ವಚ್ಚ ವಾಗಿಟ್ಟುಕೊಳ್ಳುವ ಮೂಲಕ ಹಿಮ್ಮೆಟ್ಟಿಸುವಂತೆ ಮನವಿ ಮಾಡಿದರು. ಇಲಾಖೆಗಳಿಗೆ ಬರುವ ನಾಗರಿಕರೊಡನೆ ಸೌಜನ್ಯದಿಂದ ವರ್ತಿಸಿ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡಿ ಎಂದು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರು. 900 ಕೋಟಿ ಅಭಿವೃದ್ದಿ ಕೆಲಸಆಗಲು ಅಧಿಕಾರಿಗಳ ಶ್ರಮವೂ ಮುಖ್ಯವಾಗಿತ್ತು ಎಂದು ಅಧಿಕಾರಿಗಳ ಕಾರ್ಯನವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದಾಗಿ ಶಾಸಕರು ತಿಳಿಸಿದರು
ಧೋರಣೆ ಬದಲಾಗಬೇಕು: ಸಮಾಜದಲ್ಲಿ ಇಂದು ಎಲ್ಲವೂ ಕೂಡಾ ವಿದೇಶಿ ವ್ಯಾಮೋಹ ಜಾಸ್ತಿಯಾಗಿದ್ದು, ವಿದೇಶಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ನಾವು ನಮ್ಮ ಮಕ್ಕಳನ್ನು ಬಲವಂತವಾಗಿ ತಳ್ಳುವಂತಾಗಿದೆ ಇದರ ಧೋರಣೆ ನಮ್ಮಲ್ಲಿ ಬದಲಾಗಬೇಕು ಎಂದು ಆಗ್ರಹಿಸಿದರು.
ಇತಿಹಾಸ ಪುಟ ಸೇರಿರುವ ಅನೇಕ ಮುಖಂಡರು ಸರ್ಕಾರಿ ಶಾಲೆಯಲ್ಲೇ ಓದಿ ಮಹಾತ್ಮರೆನಿಸಿದ್ದಾರೆ ಎಂದರು.
ಐಎಎಸ್, ಐಪಿಎಸ್, ಕೆಎಎಸ್ ಮಾಡಿರುವವರೆಲ್ಲರೂ ಕೂಡಾ ಸರ್ಕಾರಿ ಶಾಲೆಯಲ್ಲಿ ಓದಿರುವುದು ವಿಶೇಷ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲು ಶ್ರಮಿಸುವುದಾಗಿ ಶಾಸಕ  ಬಿ. ಸುರೇಶ್ ಗೌಡ ಅಭಿಪ್ರಾಯಪಟ್ಟರು.
ಪಡಿತರ ಚೀಟಿಯಲ್ಲಿ ಆಗಿರುವ ಲೋಪವನ್ನು ಕೂಡಲೇ ಸರಿಪಡಿಸುವಂತೆ ಆಹಾರ ನೀರೀಕ್ಷಕರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಬಗ್ಗೆ ಮಾತನಾಡಿದ ಶಾಸಕರು, ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟವಾಗದಂತೆ ಎಚ್ಚರವಹಿಸಿ ಪಾರದರ್ಶಕತೆ ಮತ್ತು ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು
ಹರಿಜನ ಗಿರಿಜನ ಯೋಜನೆಯಡಿ ಮೂಂಜೂರಾಗಿರುವ ರು.1 ಕೋಟಿ ಗಳ ಅಂದಾಜು ಮೊತ್ತದ ಕಾಮಗಾರಿಗಳನ್ನು ಶೀಘ್ರ ಪ್ರಾರಂಭ ಮಾಡುವಂತೆ ಜಿ.ಪಂ ಸರ್ಕಾರಿ ಅಭಿಯಂತರರಿಗೆ ಸೂಚಿಸಿದರು. ಸಭೆಯಲ್ಲಿ ತಹಸಿಲ್ದಾರ್ ಮತ್ತು ಇಲಾಖಾ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement