ಮರಿದೇವರ ಆಯ್ಕೆಗೆ ಪ್ರಗತಿಪರರ ವಿರೋಧ
ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಪ್ರೊ- ಸಿ.ಹೆಚ್. ಮರಿದೇವರ ಆಯ್ಕೆಯನ್ನು ಪ್ರಗತಿಪರರು ವಿರೋಧಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಶ್ರೀಮಂತಿಕೆಯಲ್ಲಿ ಹಿಂದುಳಿದಿದ್ದರೂ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉಜ್ವಲ ಹಿನ್ನೆಲೆ ಹೊಂದಿದೆ. ತೀ.ನಂ.ಶ್ರೀಕಂಠಯ್ಯ,ಸಿ.ಬಿ.ಮಲ್ಲಪ್ಪ, ಹಳೇಮನೆ ಲಿಂಗದೇವರು ಸೇರಿದಂತೆ ಹತ್ತು ಹಲವು ಸಾಹಿತಿಗಳು ಹಾಗು ರಂಗಕರ್ಮಿಗಳು ಚಿಕ್ಕನಾಯಕನಹಳ್ಳಿಯನ್ನು ಕರ್ನಾಟಕ ಅಷ್ಟೇ ಅಲ್ಲ,ಭಾರತದ ಸಾಹಿತ್ಯಕ ರಂಗ ಆಳಿದ್ದಾರೆ.
ವಸ್ತುಸ್ಥಿತಿ ಹೀಗಿದ್ದರೂ, ತಾಲೂಕಿನ ಹಾಗು ಜಿಲ್ಲೆಯ ಸಾಹಿತಿಗಳ ಮೌಲ್ಯಯುತ ಕೊಡುಗೆ ಕಡೆಗಣಿಸಿ, ಜೂ. 28, 29, 30 ರಂದು ಚಿಕ್ಕನಾಯಕನಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ 9ನೇ ಜಿಲ್ಲಾ ಸಾಹಿತ್ಯ ಸಮ್ಮಳನಕ್ಕೆ ಪ್ರೊ.ಸಿ.ಹೆಚ್.ಮರಿದೇವ ಅವರನ್ನು ಸಮ್ಮಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವ ಮಾಲ್ಯಕ್ಕೆ ವಿರೋಧವಾಗಿದೆ. ಜಾತ್ಯಾತೀತ ನಿಲುವಿಗೆ ವಿರುದ್ಧವಾಗಿದೆ. ತಾಲೂಕು ಜಿಲ್ಲೆಯ ಸಾಹಿತಿಗಳ ಮೌಲ್ಯಯುತ ಕೊಡುಗೆ ಕಡೆಗಣಿಸಿದಂತಾಗಿದೆ. ಆದ್ದರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸುತ್ತಿರುವದಾಗಿ ನಾಗಕುಮಾರ್ ಚೌಕಿಮಠ್ ಮತ್ತಿತರರು ತಿಳಿಸಿದ್ದಾರೆ.