ವರದಕ್ಷಿಣೆ ದಾಹಕ್ಕೆ ಗರ್ಭಿಣಿ ಬಲಿ!
ಕ.ಪ್ರ.ವಾರ್ತೆ ಟಿ ಮಂಡ್ಯ ಟಿ ಮೇ 31
ಮಂಡ್ಯದಲ್ಲಿ ಮೇ 18ರಂದು ವರದಕ್ಷಿಣೆ ದಾಹಕ್ಕೆ ಬಲಿಯಾದ ವೈದ್ಯನ ಪತ್ನಿ ತೇಜಸ್ವಿನಿ ಸಾವಿನ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಮತ್ತೊಬ್ಬ ಗೃಹಿಣಿ ವರದಕ್ಷಿಣೆಗೆ ಭೂತಕ್ಕೆ ಬಲಿಯಾಗಿರುವ ಘಟನೆ ಮದ್ದೂರು ತಾಲೂಕಿನ ಕೋಡಿದೊಡ್ದಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ಲೋರ್ ಮಿಲ್ ಮಾಲೀಕ ಪರಮೇಶ್ ಅವರ ಪತ್ನಿ ಪುಟ್ಟ ಹೊನ್ನಮ್ಮ (25) ಮೃತಪಟ್ಟವರು. ಹುಲಿಕೆರೆ ಗ್ರಾಮದ ಚಂದ್ರಮ್ಮ ಪುಟ್ಟರಾಜು ದಂಪತಿ ಪುತ್ರಿ ಪುಟ್ಟ ಹೊನ್ನಮ್ಮ ಅವರನ್ನು ಮದ್ದೂರು ತಾಲೂಕು ಕೋಡಿದೊಡ್ಡಿಯ ಹೊಂಬಾಳಮ್ಮ ಚಿಕ್ಕಯ್ಯ ದಂಪತಿ ಮಗ ಪರಮೇಶನಿಗೆ ಕೊಟ್ಟು 7 ತಿಂಗಳ ಹಿಂದಷ್ಟೇ ವಿವಾಹ ಮಾಡಿಕೊಡಲಾಗಿತ್ತು.