ಹಳೆ ವಿದ್ಯಾರ್ಥಿಗಳ ಸವಿ ಸವಿ ನೆನಪು...
ತಿಪಟೂರು: ಸುಮಾರು ಹನ್ನೆರಡು ವರ್ಷಗಳ ನಂತರ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತಾವು ಕಲಿತ ಕಾಲೇಜಿನಲ್ಲಿ ಒಂದೆಡೆ ಸೇರಿ “ÈÚßÁæ}æÞ«æM¥ÚÁæ ಮರೆಯಲಿ uÔÛÀMVÚ’ ಎಂಬ ಅಪರೂಪದ ಕಾರ್ಯಕ್ರಮವನ್ನು ಇತ್ತೀಚೆಗೆ ತಾಲೂಕಿನ ಕುಪ್ಪಾಳಿನ ಮಲ್ಲಿಕಾರ್ಜುನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದರು.
2000-01ನೇ ಸಾಲಿನಲ್ಲಿ ಮಲ್ಲಿಕಾರ್ಜುನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದಿದ್ದ 80 ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದ ನಂತರ ತಮ್ಮದೇ ಆದ ವೃತ್ತಿ ಆರಿಸಿಕೊಂಡು ವೈವಾಹಿಕ ಜೀವನ ನಡೆಸುತ್ತಿದ್ದರು. ಹಿರಿಯ ವಿದ್ಯಾರ್ಥಿ ಆತ್ಮಾನಂದ ತಮ್ಮ ಆಗಿನ ಸಹಪಾಠಿಗಳ ವಿಳಾಸ ಪತ್ತೆ ಹಚ್ಚಿ ಅವರನ್ನೆಲ್ಲಾ ಒಂದೆಡೆ ಸೇರಿಸುವ ಕೆಲಸಕ್ಕೆ ಕೈ ಹಾಕಿದರು. ಪರಿಣಾಮ ಹಿರಿಯ ವಿದ್ಯಾರ್ಥಿಗಳು ತಮ್ಮ ಪತಿ ಪತ್ನಿ ಮಕ್ಕಳೊಂದಿಗೆ ಸೇರಿ ಪರಸ್ಪರ ತಮ್ಮ ವಿದ್ಯಾರ್ಥಿ ಜೀವನದ ಆನಂದ ಕ್ಷಣಗಳ ನೆನಪಿನ ಬುತ್ತಿಗಳನ್ನು ಮೆಲುಕು ಹಾಕಿಕೊಂಡು ಸಂತಸ ಹಂಚಿಕೊಂಡರು.
12 ವರ್ಷಗಳ ನಂತರ ಸೇರಿಕೊಂಡ ಸ್ನೇಹಿತ, ಸ್ನೇಹಿತೆಯರ ಸಂತೋಷಕ್ಕೆ ಇಲ್ಲಿ ಪಾರವೇ ಇರಲಿಲ್ಲ. ಕಾಲೇಜು ಜೀವನದ ಸಿಹಿಕಹಿ ಘಟನೆಗಳನ್ನು ಮತ್ತೆ ಮತ್ತೆ ನೆನೆದರು.
ಇದೇ ಸಂದರ್ಭದಲ್ಲಿ ತಮ್ಮೊಂದಿಗೆ ಓದಿ ಆಕಸ್ಮಿಕ ಮರಣ ಹೊಂದಿದ್ದ ಶಿವಕುಮಾರ್ ಎಂಬ ವಿದ್ಯಾರ್ಥಿಯ್ನು ನೆನೆದು ಮೌನ ಆಚರಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಕೆ.ಸಿ.ಮಲ್ಲಿಕಾರ್ಜುನಯ್ಯ, ನಿ. ಹಿರಿಯ ಶಿಕ್ಷಕ ಬಾಬುರಾವ್ ಅವರನ್ನು ಸನ್ಮಾನಿಸಲಾಯಿತು. ಆತ್ಮಾನಂದ ಚಿತ್ರಿಸಿದ್ದ 6ಅಡಿ ಗಾಂಧೀಜಿಯವರ ಭಾವಚಿತ್ರವನ್ನು ಹಿರಿಯ ವಿದ್ಯಾರ್ಥಿಗಳ ನೆನಪಿನ ಕಾಣಿಕೆಯಾಗಿ ಕಾಲೇಜಿಗೆ ನೀಡಲಾಯಿತು.