30 ವರ್ಷಗಳಿಂದ ಟೀ ಕುಡಿದು ಕುಡಿದು ಸಾಕಾಗಿ ಹೋಗಿದೆ
ತುಮಕೂರು: ಕಳೆದ 30 ವರ್ಷಗಳಿಂದ ನೀವು ಕೊಡುತ್ತಿರುವ ಟೀ ಕುಡಿದು-ಕುಡಿದು ಸಾಕಾಗಿ ಹೋಗಿದೆ. ಪ್ರತಿ ಬಾರಿ ಅದೇ ಹಳೇ ಭರವಸೆ. ಆದರೆ ಕಾರ್ಯರೂಪಕ್ಕೆ ತರಲು ಯಾವ ಸರ್ಕಾರವೂ, ಅಧಿಕಾರಿಗಳೂ ಸಿದ್ಧರಿಲ್ಲ. ಜಿಲ್ಲಾದ್ಯಂತ ದಲಿತರ ಮನೆ, ಸ್ಮಶಾನ, ಉದ್ಯೋಗಕ್ಕೆ ಸಂಬಂಧಿಸಿದಂತೆ ಬರೀ ಮಾತಿನ ಭರವಸೆಯೇ ನಡೆದಿದೆ. ಇನ್ನಾದರೂ ಬೇಡಿಕೆ ಈಡೇರಿಸಿ ಎಂದು ಗುಬ್ಬಿ ತಾಲೂಕು ದಲಿತ ಮುಖಂಡ ಮಾರನಹಳ್ಳಿ ಶಿವಣ್ಣ ಬೇಸರ ವ್ಯಕ್ತಪಡಿಸುತ್ತಲೇ ವೇದಿಕೆ ಹತ್ತಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು.