ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅನ್ನ ನೀಡಲು ಕೈಗಾರಿಕೆಗಳಿಂದ ಸಾಧ್ಯವಿಲ್ಲ: ಸುಧಾಕರ್

Rashmi Kasaragodu
Updated On : 27 Nov 2013, 1:59 am

ಕನ್ನಡಪ್ರಭ ವಾರ್ತೆ, ಕೊರಟಗೆರೆ, ನ.26
ದೇಶದಲ್ಲಿ ಎಷ್ಟೇ ಕೈಗಾರಿಕಾ ಕ್ರಾಂತಿ ನಡೆದರೂ ದೇಶಕ್ಕೆ ಅನ್ನ ನೀಡಲು ರೈತನಿಂದ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಕೊರಟಗೆರೆ ಶಾಸಕ ಪಿ.ಆರ್. ಸುಧಾಕರ್ ಲಾಲ್ ಮಾರ್ಮಿಕವಾಗಿ ನುಡಿದರು.
ಅವರು ಶನಿವಾರ ತಾಲೂಕಿನ ಸೋಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಈ ಸಾಲಿನ ಭೂ ಚೇತನ ಯೋಜನೆಯ ತಾಲೂಕು ಮಟ್ಟದ ಕ್ಷೇತ್ರೋತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ರೈತರ ಕುರಿತು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಅವರಿಗೆ ತಲುಪಬೇಕಾದ ಸವಲತ್ತುಗಳನ್ನು ಯಾವುದೇ ತಕರಾರಿಲ್ಲದೆ ತಲುಪಿಸಬೇಕು. ರೈತರು ಆರ್ಥಿಕವಾಗಿ ಸಧೃಡರಾಗಬೇಕು. ಆಗ ಅವರ ಕುಟುಂಬವಲ್ಲದೇ ಇಡೀ ದೇಶವೇ ಸದೃಢವಾಗುತ್ತದೆ ಎಂದರು.
ಹಿನ್ನಡೆ: ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ನೀರಾವರಿ ಯೋಜನೆಗಳಿವೆ. ಆದರೆ ಬಯಲು ಸೀಮೆಯಲ್ಲಿ ಮಾತ್ರ ನೀರಾವರಿ ಯೋಜನೆಗಳಿಲ್ಲ. ಇದರಿಂದ ಇಲ್ಲಿನ ರೈತರಿಗೆ ತೊಂದರೆಯಾಗುತ್ತಿದೆ. ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಹೋರಾಟ ಅಭಿಯಾನ ಹಮ್ಮಿಕೊಳ್ಳಲಿದ್ದು ಎಲ್ಲಾ ರೈತರು ಕೈ ಜೋಡಿಸುವಂತೆ ಮನವಿ ಮಾಡಿದರು.
ಸಹಾಯಕ ಕೃಷಿ ನಿರ್ದೇಶಕ ರಾಮಹನುಮಯ್ಯ ಮಾತನಾಡಿ, ರೈತರು ಬಿತ್ತನೆ ಬೀಜಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಸ್ವಬೀಜಾಬಿವಣದ್ಧಿ ಯೋಜನೆಯನ್ನು ಸರ್ಕಾರ ಚಾಲ್ತಿಗೆ ತಂದಿದ್ದು, ರೈತರೇ ತಮ್ಮ ಬಿತ್ತನೆ ಬೀಜವನ್ನು ಇಟ್ಟುಕೊಂಡು, ಕೃಷಿ ಪದ್ಧತಿಯನ್ನು ಬದಲಾಯಿಸಿಕೊಂಡು ಉತ್ತಮ ಬೆಳೆ ಬೆಳೆಯಲು ಕ್ಷೇತ್ರೋತ್ಸವದಲ್ಲಿ ಉತ್ತೇಜಿಸಲಾಗುವುದು ಎಂದರು.
ಈ ಸಮಾರಂಭದಲ್ಲಿ ಕೃಷಿ ವಿಜ್ಞಾನಿ ಡಾ. ಚಿನ್ನಿಕೃಷ್ಣ, ಕೃಷಿ ಅಧಿಕಾರಿಗಳಾದ ಕಲ್ಲೇಶಪ್ಪ, ನೂರ್ ಆಜಾಮ್, ಕೆ.ಎಂ ಹರೀಶ್ ಕುಮಾರ್,  ತಾ.ಪಂ ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ವಿ ಪ್ರಕಾಶ್, ಅಕ್ಕಿರಾಂಪುರ ಗ್ರಾ.ಪಂ ಅಧ್ಯಕ್ಷ ವೆಂಕಟರವಣಪ್ಪ, ಮುಖಂಡರಾದ ಮಹಾಲಿಂಗಪ್ಪ, ಎಲ್. ರಾಜಣ್ಣ, ಬಾಲೇಹಳ್ಳಿ ನಾಗಭೂಷಣ್, ಈರಣ್ಣ, ನಯಾಜ್, ಹನುಮಾನ್ ಸೇರಿದಂತೆ ನೂರಾರು ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement