ಇಂದು ಬೀಳ್ಕೊಡುಗೆ, ಸನ್ಮಾನ ಸಮಾರಂಭ
ಶಿರಾ: ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಇತ್ತೀಚೆಗೆ ವರ್ಗಾವಣೆಯಾದ ಅಧಿಕಾರಿಗಳಿಗೆ ಬೀಳ್ಕೊಡುಗೆ, ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.
ನ. 27 ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಈ ಸಮಾರಂಭವನ್ನು ಜಿಲ್ಲಾ ಯೋಜನಾ ನಿರ್ದೆಶಕರಾದ ಎಸ್.ಸಿದ್ದರಾಮಯ್ಯ ಉದ್ಘಾಟಿಸುವರು. ಉಪ ವಿಭಾಗಾಧಿಕಾರಿ ತಬ್ಸಮ್ ಜುಹೇರಾ ಅವರು ಅಧ್ಯಕ್ಷತೆ ವಹಿಸುವರು. ಪೌರಾಯುಕ್ತ ಈರಾನಾಯ್ಕ ಅವರು ಸನ್ಮಾನಿಸುವರು ಎಂದು ಆಯೋಜಕರು ತಿಳಿಸಿದ್ದಾರೆ.