ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಾವಗಡ ಚಿನ್ನಮ್ಮನಹಳ್ಳಿಯಲ್ಲಿ ಜೀತಪದ್ಧತಿ

Rashmi Kasaragodu
Updated On : 27 Nov 2013, 2:00 am

ತುಮಕೂರು: ಪಾವಗಡದ ಚಿನ್ನಮ್ಮನಹಳ್ಳಿಯಲ್ಲಿ ಜೀತಪದ್ಧತಿ ಚಾಲ್ತಿಯಲ್ಲಿದೆ ಎಂದು ಜೀತಮುಕ್ತ ಹಾಗೂ ತಮಟೆ ಕಲಾವಿದರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಟಿ. ಹನುಮಂತರಾಯ ದಲಿತರ ಕುಂದು ಕೊರತೆ ಸಭೆಯಲ್ಲಿ ಆರೋಪಿಸಿದರು.
ಆ ಸಂದರ್ಭದಲ್ಲಿ ಸಭೆಯಲ್ಲಿ ಉಂಟಾದ ಗದ್ದಲದಿಂದ ಮಾತು ಮುಂದುವರೆಸಲಾಗದ ಹನುಮಂತರಾಯ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಿನ್ನಮ್ಮನಹಳ್ಳಿಯಲ್ಲಿ ಹಾಲಿ ಚಿಕ್ಕಬಳ್ಳಾಪುರ ಸಬ್ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಭೋಜರಾಜು ಅವರ ಜಮೀನಿನಲ್ಲಿ 4 ಮಂದಿ ಕಳೆದ 6-7 ವರ್ಷಗಳಿಂದ ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಈ ಜೀತ ನಡೆದೇ ಇದೆ. ಈ ಕುರಿತು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹನುಮಂತರಾಯ ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿವರ್ಷ ಜೀತದಾಳುಗಳ ಸಮೀಕ್ಷೆ ನಡೆಯಬೇಕು. ಆದರೆ ಜಿಲ್ಲೆಯಲ್ಲಿ ಕಳೆದ 6 -7 ವರ್ಷಗಳಿಂದ ಸರ್ವೆ ನಡೆದಿಲ್ಲ. 2006 ರಲ್ಲಿ ನಡೆದ ಸರ್ವೆಯೇ ಕಡೆಯದು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಸೆಪ್ಟಂಬರ್ನಲ್ಲಿ ಪಾವಗಡ ತಾಲೂಕು ಕಚೇರಿ
ಎದುರು ತಮ್ಮ ಸಂಘಟನೆ ವತಿಯಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು. ತಹಸೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಪಂ ಸಮೀಕ್ಷೆ ಕೂಡ ಆಗಿಲ್ಲ ಎಂದು ಹನುಮಂತರಾಯ ಆಕ್ರೋಶವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement