ಪ್ರತಿಭಾ ಕಾರಂಜಿ ಉದ್ಘಾಟನೆ
ತಿಪಟೂರು: ತಾಲೂಕಿನ ಸಾರ್ಥವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013-14ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಈರಮ್ಮ ವಹಿಸಿದ್ದರು. ಮಾಜಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರಯ್ಯ, ಗ್ರಾ.ಪಂ. ಸದಸ್ಯ ಶಿವಪ್ಪ, ಮುಖಂಡರಾದ ಪರಮೇಶ್, ಮರುಳಪ್ಪ, ಬಿ.ಆರ್.ಪ್ರಭು, ಕಿಡ್ಜಿಶಾಲೆ ಸಂಸ್ಥಾಪಕ ಕೇಶವ್ ಕುಮಾರ್ ಮತ್ತಿತರರಿದ್ದರು.
ಈ ಸಂದರ್ಭದಲ್ಲಿ ಕ್ಲಸ್ಟರ್ ಮಟ್ಟದ ಶಾಲೆಗಳಿಂದ ಬಂದಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು.
ಮುಖ್ಯ ಶಿಕ್ಷಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಕೆ.ನಾಗರಾಜು ಸ್ವಾಗತಿಸಿ, ಶಿಕ್ಷಕರಾದ ಪದ್ಮಾವತಿ ಪ್ರಾರ್ಥಿಸಿ, ಸತ್ಯನಾರಾಯಣ ನಿರೂಪಿಸಿ, ಚಂದ್ರಕಲಾ ವಂದಿಸಿದರು.