ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ
ಕೊರಟಗೆರೆ: ಇಲ್ಲಿಗೆ ಸಮೀಪದ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ 25 ನೇ ರಜತ ಮಹೋತ್ಸವ ಅಂಗವಾಗಿ ನ.27 ರಿಂದ 29 ರವೆರಗೆ ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಉಚಿತ ಸಾಮೂಹಿಕ ವಿವಾಹ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಸಂಬಂಧ ಹೋಮ, ಹವನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹರ್ಷಿ ದರ್ಪಣ ಖ್ಯಾತಿಯ ಜ್ಯೋತಿಷ್ಯ ತಜ್ಞ ಡಾ.ಮಹರ್ಷಿ ಆನಂದ ಗುರೂಜೀ ಅವರ ಸಾನಿಧ್ಯದಲ್ಲಿ ಬೆಳಿಗ್ಗೆ 9 ರಿಂದ 1-30 ರವರೆಗೆ ಶ್ರೀ ಮಹಾಲಕ್ಷ್ಮೀ ನಮೋಸ್ತುತೆ ವಿಶೇಷ ಪೂಜೆ ನಡೆಯಲಿದ್ದು ಪೂಜೆಯಲ್ಲಿ ಭಾಗವಹಿಸುವ ಎಲ್ಲಾ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸೀರೆ, ಕಣ ಮತ್ತು ಲಕ್ಷ್ಮೀ ನಾಣ್ಯ ವನ್ನು ಪ್ರಸಾದದೊಂದಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡುವುದಾಗಿ ಟ್ರಸ್ಟ್ನ ಇಓ ದಾಸಸರಹಳ್ಳಿ ರಮೇಶ್ ತಿಳಿಸಿದ್ದಾರೆ.