ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಧುನಿಕ ಬದುಕಿಗೆ ಜೋತು ಬಿದ್ದು ಗ್ರಾಮೀಣ ಬದುಕಿಗೆ ವಿದಾಯ: ವಿಷಾದ

Mainashree
Updated On : 27 Nov 2013, 11:25 am

ತುರುವೇಕೆರೆ: ಇಂದಿನ ಯುವಕರು ಆಧುನಿಕ ಬದುಕಿನ ಸೆಳೆತಕ್ಕೆ ಸಿಲುಕಿ ಗ್ರಾಮೀಣ ಬದುಕಿಗೆ ವಿದಾಯ ಹೇಳುತ್ತಿರುವುದು ವಿಷಾದನೀಯ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ವಿ.ನಾಗರಾಜು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆ ಮತ್ತು ಕೊಡಗೀಹಳ್ಳಿ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕೃಷಿ ಹಾಗೂ ಹೈನುಗಾರಿಕೆ ಕುರಿತ ವಿಚಾರ ಸಂಕಿರಣದ ಕುರಿತು ಅವರು ಮಾತನಾಡುತ್ತಿದ್ದರು.
ಗೋವನ್ನು ಕಾಮಧೇನು ಹಾಗೂ ಸುರಭಿ ಎಂದೆಲ್ಲಾ ಕರೆಯಲಾಗುತ್ತಿತ್ತು. ಹೈನುಗಾರಿಕೆಯಲ್ಲೇ ಅನೇಕ ಕುಟುಂಬಗಳು ಆರ್ಥಿಕ ಸಂಪನ್ನರಾಗಿದ್ದ ದಿನಗಳೂ ಇವೆ. ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ಉಪಕಸುಬಾಗಿ ನಿರ್ವಹಿಸಿಕೊಂಡು ಜೀವನದ ಭದ್ರತೆಯನ್ನು ಕಂಡು ಕೊಂಡಿದ್ದರು. ಆದರೆ ಇಂದು ಯುವಕರು ಆಧುನಿಕತೆಯ ಭ್ರಮೆಗೆ ಒಳಗಾಗಿ ಸೊಗಸಾದ ಗ್ರಾಮೀಣ ಸೊಗಡಿನ ಭೂತಾಯಿಯನ್ನು ಹಾಗೂ ಹೈನುಗಾರಿಕೆಯನ್ನು ಮರೆತು ನಗರ ಸೇರುತ್ತಿದ್ದಾರೆ ಎಂದು ವಿಷಾದಿಸಿದರು.
 ಯೋಜನಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿದರು. ಕೊಡಗೀಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಅಶೋಕ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಯಣ್ಣ,  ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ದೇವರಾಜು, ಒಕ್ಕೂಟಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು. ವಿಚಾರಣಾ ಸಂಕಿರಣದಲ್ಲಿ ಜಾನುವಾರುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಉತ್ತಮ ರಾಸುಗಳಿಗೆ ಬಹುಮಾನವನ್ನೂ ಸಹ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement