ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 27 Nov 2013, 11:25 am

ಇಂದು ಸ್ಪಂದನ
ತುಮಕೂರು: ತುಮಕೂರಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನ. 28 ರಿಂದ 30 ರವರೆಗೆ ಸ್ಪಂದನ 2013 ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನ. 28 ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಧ್ವಜಾರೋಹಣವನ್ನು ಬಿರ್ಲಾ ಸಭಾಂಗಣದ ಮುಂಭಾಗ ನೆರವೇರಿಸಲಾಗುವುದು.  ಸಂಜೆ 5 ಗಂಟೆಗೆ ಸ್ಪಂದನ ಉದ್ಘಾಟನಾ ಸಮಾರಂಭ ಏರ್ಪಾಟಾಗಿದ್ದು, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಹಿರಿಯ ವಿದ್ಯಾರ್ಥಿ ಹಾಗೂ ಕೈಗಾರಿಕೋದ್ಯಮಿ ಬೆಂಗಳೂರಿನ ಬಿ.ಎಸ್. ದಿವಾಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲ್ಲಿದ್ದಾರೆ. ಪ್ರಿನ್ಸಿಪಾಲ್ ಡಾ. ಶಿವಕುಮಾರಯ್ಯ, ಡೀನ್ ಪ್ರೊ. ಬಸವರಾಜಯ್ಯ  ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. 29 ರಂದು ಸಂಜೆ 6-30 ಕ್ಕೆ ಹಾಸ್ಯ ಸಂಜೆ ಏರ್ಪಾಟಾಗಿದೆ. ಹೊಳೆ ನರಸೀಪುರದ ಖ್ಯಾತ ಹಾಸ್ಯ ಕಲಾವಿದ ಕೋಟೆ ನಾಗರಾಜ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 30 ರಂದು ಸಂಜೆ 5-30 ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಏರ್ಪಾಟಾಗಿದೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟರಾದ ದೊಡ್ಡಣ್ಣ, ಮೋಹನ್ ಪಾಲ್ಗೊಳ್ಳಲ್ಲಿದ್ದಾರೆ.
ಅಭಿನಂದನಾ ಸಮಾರಂಭ
ಎಂ.ಬಿ. ಜೀವರತ್ನ ಅವರ 75 ನೇ ಜನ್ಮದಿನದ ಅಂಗವಾಗಿ ಅಭಿನಂದನೆ, ಜಾಗತೀಕರಣದಲ್ಲಿ ಅಭಿವೃದ್ಧಿ ಮತ್ತು ಮಹಿಳೆ ಸಂವಾದ ಕಾರ್ಯಕ್ರಮವನ್ನು ತುಮಕೂರಿನ ರವೀಂದ್ರ ಆರ್ಟ್ ಗ್ಯಾಲರಿಯಲ್ಲಿ  ಹಮ್ಮಿಕೊಳ್ಳಲಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂವನಹನ ಸಮಾಲೋಚಕರಾದ  ಎಸ್. ಸತ್ಯ ವಿಷಯ ಮಂಡಿಸಲಿದ್ದಾರೆ. ಡಾ.ಎಚ್. ಎಸ್. ನಿರಂಜನಾರಾಧ್ಯ, ವಕೀಲೆ ಎಂ. ಷಹಜಾಬಿ, ಚರಕ ಆಸ್ಪತ್ರೆಯ ಡಾ. ಬಸವರಾಜು ಪ್ರತಿಕ್ರಿಯೆ ನೀಡಲಿದ್ದಾರೆ. ಜೀವರತ್ನ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಬಾ.ಹ. ರಮಾಕುಮಾರಿ ವಹಿಸಲಿದ್ದಾರೆ.ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಲೇಖಕಿ ಬಿ.ಸಿ. ಶೈಲಾ ನಾಗರಾಜ್, ವಕೀಲ ರವೀಂದ್ರನಾಥ ಠಾಗೂರ್, ಎನ್.ಎ. ಖಾನ್ ಅಭಿನಂದಿಸಲಿದ್ದಾರೆ.
ಇಂದು ಚಿತ್ರ ಸ್ಪರ್ಧೆ
ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ನ. 28 ರಂದು ತುಮಕೂರು ವಿಜ್ಞಾನ ಕೇಂದ್ರ ಜಿಲ್ಲಾಡಳಿತ, ಸಾರಿಗೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದೆ. ನ. 28 ಬೆಳಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಎಂಜಿ ರಸ್ತೆಯ ಬಾಲಭವನದ ಆವರಣದಲ್ಲಿ ಏರ್ಪಡಿಸಿದೆ.
ಕಚೇರಿ ಸ್ಥಳಾಂತರ
ತುಮಕೂರಿನ ಮಾತೃಶ್ರೀ ಪತ್ತಿನ ಸಹಕಾರ ಸಂಘವನ್ನು ನ. 28 ರಿಂದ ಕ್ಯಾತ್ಸಂದ್ರದ ಮೈದಾಳ ಮುಖ್ಯರಸ್ತೆಯ ಸಂಜಯ ನಗರ ಬಡಾವಣೆಯ ನಿವೇದಿತಾ ಪ್ರೌಢಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಬಿಜೆಪಿ ರೈತ ಮೋರ್ಚಾ ಖಂಡನೆ
ಗುಬ್ಬಿ: ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆಯುತ್ತಿರುವ ಕಬ್ಬಿಗೆ ಬೆಂಬಲ ಬೆಲೆ ನಿಗದಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕಳೆದ ಹಲವು ದಿನಗಳಿಂದಲೂ ನಿರಂತರ ಹೋರಾಟ ಮಾಡುತ್ತಿದ್ದರೂ ರೈತರ ಸಮಸ್ಯೆಗೆ ಸ್ಪಂದಿಸದಿದ್ದರಿಂದ ಬೇಸತ್ತ ರೈತ ವಿಠಲ ಅರಭಾವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಈ ಘಟನೆಗೆ ರಾಜ್ಯದ ಮುಖ್ಯ ಮಂತ್ರಿಗಳು ಹಾಗೂ ಅವರ ಸರಕಾರವೇ ನೇರ ಹೊಣೆಯಾಗಿದೆ. ಕಾಂಗ್ರೆಸ್ ರೈತ ವಿರೋಧಿ ನೀತಿಯನ್ನು ಖಂಡಿಸಿ ನ.28 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ  ಪ್ರತಿಭಟನೆ ನಡೆಸಲಾಗುವುದೆಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎಚ್.ಬಿ.ಸಿದ್ದರಾಮಯ್ಯ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದ್ದಾರೆ.
ಶ್ರದ್ಧಾಂಜಲಿ
ಹುಳಿಯಾರು: ಆರ್ಯವೈಶ್ಯ ಸಮುದಾಯದ ವಾಸವಿ ವಿಶ್ವಗುರುಗಳಾದ ಬೆಂಗಳೂರಿನ ಶ್ರೀ ಚಂದ್ರಶೇಖರಾನಂದಗಿರಿ ಸ್ವಾಮೀಜಿ ಅವರು ಅನಾರೋಗ್ಯದಿಂದ ವಿಧಿವಶರಾದ ಹಿನ್ನಲೆಯಲ್ಲಿ  ಮಂಗಳವಾರ ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿ ಹಾಗೂ ಸಮುದಾಯದವರು ಸಂತಾಪ ಸೂಚನೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement