ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 27 Nov 2013, 11:26 am

ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲು ದಿನಾಂಕ ನಿಗದಿ
ಕುಣಿಗಲ್: 2014-15ನೇ ಸಾಲಿಗೆ ಶಿಕ್ಷಣ ಹಕ್ಕು ನಿಧಿನಿಯಮದ ಪ್ರಕಾರ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿನ ಒಟ್ಟಾರೆ ದಾಖಲಾಗಿಯ ಶೇ.25 ರಷ್ಟನ್ನು ಪ್ರಾರಂಭದ ತರಗತಿಗೆ ಮೀಸಲಾತಿ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಆಯಾ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲು ದಿನಾಂಕ ನಿಗದಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲೆಯವರು ಪೂರ್ವ ಸಿದ್ಧತೆಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆಯಾ ಬ್ಲಾಕ್‌ಗಳಲ್ಲಿನ ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿನ ಶೇ.25ರಷ್ಟಿನ ಸೀಟುಗಳ ಲಭ್ಯತೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಿದ್ದು, ಈ ದಿಸೆಯಲ್ಲಿ ಸಂಬಂಧಪಟ್ಟ ಪೋಷಕರು ತನ್ನ ನೆರೆಹೊರೆಯ ಅನುದಾನ ರಹಿತ ಶಾಲೆಗೆ ದಾಖಲಿಸಲು ಪ್ರವೇಶ ಅರ್ಜಿಗಳನ್ನು (7-10-14ರಿಂದ 8-2-14)ರೊಳಗೆ ಸಲ್ಲಿಸಲು ಸೂಚಿಸದೆ. ಹೆಚ್ಚಿನ ಮಾಹಿತಿಗೆ ಆರ್‌ಟಿಇ ನೋಡಲ್ ಅಧಿಕಾರಿ ಸತೀಶ್ ಕುಮಾರ್ ಅವರನ್ನು ಅಥವಾ ಬಿಇಒ ಅವರನ್ನು ಸಂಪರ್ಕಿಸುವಂತೆ ಬಿಇಒ ಸಿದ್ದಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರತಿಭಾ ಕಾರಂಜಿಯಿಂದ ಬಹುಮುಖ ಪ್ರತಿಭೆ ಪರಿಚಯ
ಕುಣಿಗಲ್: ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದಾಗಿ ಗ್ರಾಮಾಂತರ ಪ್ರದೇಶದಲ್ಲಿ ಅಡಗಿರುವ ಬಹಮುಖ ಪ್ರತಿಭೆಗಳು ಹೊರಜಗತ್ತಿಗೆ ಪರಿಚಯಗೊಂಡು, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸಹಕಾರಿಯಾಗಿದೆ ಎಂದು ಬಸವಮತ್ತಿಕೆರೆ ಎಸ್‌ಡಿಎಂಸಿ ಅಧ್ಯಕ್ಷ ಜಯಮೂರ್ತಿ ತಿಳಿಸಿದರು. ಬುಧವಾರ, ತಾಲೂಕಿನ ಯಡೆಯೂರು ಹೋಬಳಿ ಬಸವಮತ್ತೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೊಂಬರಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದೇಶದ ಮಹಾಕಾವ್ಯವಾದ ಮಹಾಭಾರತದಲ್ಲಿ ವಿವರಿಸುವಂತೆ ಶಿಷ್ಯ ಗುರುವಿಗಿಂತಲೂ ಉತ್ತಮ ಸಾಧನೆ ಮಾಡಿ, ಮಗ ತಾನು ಉತ್ತಮ ಕೆಲಸವನ್ನು ಮಾಡುವ ಮೂಲಕ ತಂದೆಯ ಹೆಸರಿಗಿಂತಲೂ ಉತ್ತಮಸಾಧನೆ ಮಾಡುವ ರೀತಿಯಲ್ಲಿ, ಮಕ್ಕಳು ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯ ಅನಾವರಣ ಮಾಡಬೇಕು. ಈನೆಲದ ಜನಪದ ಸೊಗಡು ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಅಡಗಿದ್ದು, ಇದನ್ನು ಉಳಿಸಿ, ಬೆಳೆಸುವತ್ತಲೂ ಗಮನಹರಿಸಬೇಕೆಂದರು. ಕಾರ್ಯಕ್ರಮದಲ್ಲಿ ಯಾವುದೇ ಚಲಚಿತ್ರ ಧ್ವನಿಸುರುಳಿಗಳ ಅಬ್ಬರವಿಲ್ಲದೆ, ಗ್ರಾಮಾಂತರ ಪ್ರದೇಶದ ದೊಂಬರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹತ್ತು ಶಾಲೆಗಳ 120 ಮಕ್ಕಳು ವಿವಿಧ ಪ್ರತಿಭೆ ಅನಾವರಣ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ವಿವಿಧ ಸಾಮೂಹಿಕ ನೃತ್ಯಗಾಯನ ಸ್ಪರ್ಧೆಗಳಲ್ಲಿ ಎಲ್ಲಾ ತಂಡಗಳು ಜನಪದ ಗೀತೆಗಳನ್ನು ತಾವೇ ಹಾಡಿ ನೃತ್ಯ ಮಾಡುವ ಮೂಲಕ ನ್ಯತ್ಯ ಮತ್ತು ಗಾಯನದಲ್ಲಿನ ತಮ್ಮ ಪ್ರತಿಭೆ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement