ಉಮೇಶ್ಗೆ ಶ್ರೀಲಂಕಾ ವಿವಿ ಡಾಕ್ಟರೇಟ್
ತುಮಕೂರು: ಜಿಲ್ಲೆ ಮೂಲದ ಯುವ ಉದ್ಯಮಿ ಬಿ.ಎಂ.ಉಮೇಶ್ಕುಮಾರ್ ಶ್ರೀಲಂಕಾದ 'ಮೆಡಿಸಿನಾ ಆಲ್ಟರ್ನೇಟಿವಾ ಯೂನಿವರ್ಸಿಟಿ ಬಿಜೆನೆಸ್ ಮ್ಯಾನೇಜ್ಮೆಂಟ್'ನಲ್ಲಿ ಡಾಕ್ಟರ್ ಆಫ್ ಆನರ್ಸ್ ಪದವಿ ನೀಡಿ ಗೌರವಿಸಿದೆ.
ಲಿಫ್ಟ್ ಕೈಗಾರಿಕಾ ಘಟಕ ಸ್ಥಾಪಿಸಿ ರಾಜ್ಯ ಸೇರಿದಂತೆ ಹೊರ ರಾಜ್ಯ, ರಾಷ್ಟ್ರಗಳಿಗೂ ರಫ್ತು ಉದ್ದಿಮೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದು, ಕೊಲಂಬೋದಲ್ಲಿ ಇತ್ತೀಚೆಗೆ ನಡೆದ ವಿವಿ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ್ದಾರೆ.
ಉದ್ಯಮಿ ಉಮೇಶ್ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಮಕೂರಿನ ಶಿಲ್ಪಿ ದಿ.ಕೆ.ಎಚ್. ರಾಜಶೇಖರಚಾರ್ ಹಾಗೂ ಹೆಸರಾಂತ ಖಂಜರ ವಿದ್ವಾನ್ ದಿ.ಎಚ್.ಪಿ. ರಾಮಚಾರ್ ಮೊಮ್ಮಗನಾಗಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಕಿರಿಯ ವಯಸ್ಸಿನಲ್ಲೇ ಸಾಧನೆಯ ಗರಿ ಮೂಡಿಸಿಕೊಂಡಿದ್ದಾರೆ.