ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ವೈಜ್ಞಾನಿಕ ವ್ಯವಸಾಯಪದ್ಧತಿ ಅಳವಡಿಸಿಕೊಳ್ಳಿ'

Mainashree
Updated On : 28 Nov 2013, 10:59 am

ಕುಣಿಗಲ್: ರೈತರು ಹವಾಮಾನ ಕಾಲಕ್ಕೆ ತಕ್ಕಂತೆ, ಕೃಷಿ ಕ್ಷೇತ್ರದಲ್ಲಿ ಬದಲಾವಣೆಗೆ ತಕ್ಕಂತೆ ಪರಸರ ಸ್ನೇಹಿ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳಯುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಪಿ.ಶಶಿರೇಖಾ ತಿಳಿಸಿದರು.
ತಾಲೂಕಿನ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಬೆಳೆಗಳಿಗೆ ವಿವಿಧ ರೀತಿಯ ಕ್ರೀಮಿ, ಕೀಟಗಳ ಬಾಧೆ ಬರುತ್ತಿದ್ದು ರೈತರು ವುಗಳ ನಿಯಂತ್ರಣಕ್ಕೆ ರಸಾಯನಿಕ ಬಳಸದೆ ಸ್ಥಳೀಯವಾಗಿ ಲಭ್ಯವಾಗುವ ವಿವಿಧ ವಸ್ತುಗಳನ್ನು ಬಳಸಿಕೊಂಡು ಅವುಗಳನ್ನು ಪರಿಣಾಮಕಾರಿಯಾಗಿ ಮತ್ತು ಪರಿಸ್ನೇಹಿಯಾಗಿ ನಿಯಂತ್ರಿಸುವ ಮೂಲಕ ಪರಿಸರ ಸ್ನೇಹಿ ಕೃಷಿಗೆ ಆದ್ಯತೆ ನೀಡುವುದಲ್ಲದೆ ರಾಸಯನಿಕ ಮುಕ್ತ ಆಹಾರಧಾನ್ಯಗಳ ಉತ್ಪಾದನೆಗೆ ಮನಸು ಮಾಡಬೇಕೆಂದರು. ಕೃಷಿ ಅಧಿಕಾರಿ ಕು.ಅರುಣಿ, ಮುಖಂಡರಾದ ಬಸವೇಗೌಡ, ಧನಂಜಯಮೂರ್ತಿ, ಸತೀಶ್, ವಲಯ ಮೇಲ್ವಿಚಾರಕ ರಾಘವೇಂದ್ರ, ತಿಪ್ಪನಾಯಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement