ಸುದ್ದಿ ಸಂಕ್ಷೇಪ
ಬ್ಯಾಡ್ಮಿಂಟನ್ ಪಂದ್ಯಾವಳಿ
ಹುಳಿಯಾರು: ಎಕ್ಸಲೆಂಟ್ ಸ್ಪೋರ್ಟ್ ಕ್ಲಬ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಶನಿವಾರ ಮತ್ತು ಭಾನುವಾರ ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನವಾಗಿ 10 ಸಾವಿರ ಹಾಗೂ ಪಾರಿತೋಷಕ,ದ್ವಿತೀಯ ಬಹುಮಾನವಾಗಿ 5ಸಾವಿರ ಹಾಗೂ ಪಾರಿತೋಷಕ, ತೃತೀಯ ಬಹುಮಾನವಾಗಿ 3ಸಾವಿರ ಹಾಗೂ ಪಾರಿತೋಷಕವಿದ್ದು, ಪ್ರವೇಶ ಶುಲ್ಕ 300 ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಶೋಕ್ ಬಾಬು (9448659569), ತ್ಯಾಗರಾಜ್ (9008274420) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
'ರೈತಪರ ಯೋಜನೆ ಜಾರಿಯಾಗಲಿ'
ಪಾವಗಡ: ಬೆಳಗಾವಿಯ ಚಳಿಗಾಲದ ಅಧಿವೇಶನ 3ನೇ ದಿನಕ್ಕೆ ಕಾಲಿಟ್ಟಿದ್ದು ಅಧಿವೇಶನದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ನೆಲೆಗಡಲೆ ಹಾಗೂ ಇತರೆ ಇಲ್ಲಿನ ಪ್ರಮುಖ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಸರ್ಕಾರಕ್ಕೆ ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಪಾವಗಡ ತಾಲೂಕು ಗಡಿ ಭಾಗದಲ್ಲಿದ್ದು ಆನೇಕ ಸರ್ಕಾರ ಸೌಲಭ್ಯಗಳಿಂದ ವಂಚಿತವಾಗಿದೆ. ಶೇಂಗಾ ಸೇರಿದಂತೆ ಇಲ್ಲಿನ ಪ್ರಮುಖ ಬೆಳೆಗಳು ಆನಾವ್ರಷ್ಟಿ ಮತ್ತು ಅತಿವೃಷ್ಟಿಯಿಂದ ಕಳೆದ 10ವರ್ಷಗಳಿಂದ ನಷ್ಟಕ್ಕಿಡಾಗುತ್ತಿದ್ದು, ಬೆಳೆ ನಷ್ಟ ಪರಿಹಾರ ಸೇರಿದಂತೆ ಫಸಲಿಗೆ ಅಲ್ಪಸಲ್ಪ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಂದಿನ ಯುವಜನರುಕೃಷಿಯಿಂದ ವಿಮುಖರಾಗಿ ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವ ವ್ಯವಸ್ಥೆ ತಪ್ಪಿಸಬೇಕು ಎಂದು ರೈತರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಬಾಗುವಾಳದ ಮುನಿಯಪ್ಪ ಸ್ವಾಮಿ 83ನೇ ವರ್ಷದ ಕಾರ್ತೀಕ ಹಾಗೂ ಜಾತ್ರಾ ಮಹೋತ್ಸವ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಡಿ.1ರಿಂದ 10ರವರೆಗೆ ನಡೆಯಲಿದೆ. ಡಿ.1ರಂದು ಹಾಲಪಲ್ಲಕ್ಕಿ ಉತ್ಸವ, ಧ್ವಜಾರೋಹಣ, ಡಿ.2ಗಂಗಾಪೂಜೆ, ಮಹಾರುದ್ರಾಭಿಷೇಕ, ಕಳಸಪೂಜೆ, ಬಿಲ್ಲಗೂಡು ದೀಪೋತ್ಸವ, ದೀಪಾರಾದಣೆ, ಡಿ.3ರಂದು ಅಗ್ನಿಕುಂಡೋತ್ಸವ, ಡಿ.4 ಆರತಿ ಬಾನ, ಡಿ.5,6 ಮತ್ತು 7ರಂದು ಸ್ವಾಮಿಯವರ ಉತ್ಸವ ನಡೆಯಲಿವೆ. ಡಿ.8 ದೀಪಾಲಂಕೃತೋತ್ಸವ ಮತ್ತು ಕೀಲುಕುದರೆ ನರ್ತನ, ಡಿ. 9 ಮುನಿಯಪ್ಪ ಸ್ವಾಮಿ ರಥೋತ್ಸವ ಮತ್ತು ಅನ್ನಸಂತರ್ಪಣೆ, ಅಡ್ಡಪಲ್ಲಕ್ಕಿ ಉತ್ಸವ ಡಿ. 10ರಂದು ಹಾಲಪಲ್ಲಕ್ಕಿ ಉತ್ಸವ ನಡೆಯಲಿದೆ.